ವಿಟ್ಲದ ಮೊಹಮ್ಮದ್ ಮೆಹ್ರಾನ್ ಅಬ್ದುಲ್ ಖಾದರ್ ಅವರಿಗೆ JEE Advance ನಲ್ಲಿ 2321 ನೇ ರಾಂಕ್
ವಿಟ್ಲ: ಇವತ್ತು ಫಲಿತಾಂಶ ಪ್ರಕಟವಾದ JEE ಅಡ್ವಾನ್ಸ್ ಪರೀಕ್ಷೆಯಲ್ಲಿ ವಿಟ್ಲದ ವಿದ್ಯಾರ್ಥಿ ಮೆಹರಾನ್ ರವರು ಅಖಿಲ ಭಾರತ ಮಟ್ಟದಲ್ಲಿ 2321 ನೇ ರಾಂಕ್ ಅನ್ನು ಪಡೆದು ಊರಿಗೆ ಅಭಿಮಾನವನ್ನು ತಂದಿರುತ್ತಾರೆ.

ವಿಟ್ಲ ಒಕ್ಕೆತ್ತೂರಿನ ಅಬ್ದುಲ್ ಖಾದರ್ ಮತ್ತು ರಶೀದಾ ದಂಪತಿಗಳ ಪುತ್ರನಾದ ಇವರು ಪ್ರಾಥಮಿಕ 5ನೇ ತರಗತಿ ತನಕ ವಿಟ್ಲ ಜೇಸಿ ಶಾಲೆಯಲ್ಲಿ ಕಲಿತು ಆರರಿಂದ ಪಿಯುಸಿ ತನಕ ಮುಡಿಪು ನವೋದಯ ಶಾಲೆಯಲ್ಲಿ ವ್ಯಾಸಂಗ ಮಾಡಿ ಜೆ ಇ ಇ ಪರೀಕ್ಷೆಗೆ ಹಾಜರಾಗಿದ್ದರು.
ಭಾರತದ ಪ್ರತಿಷ್ಠಿತ ಐಐಟಿ ಯಲ್ಲಿ ಇವರು ಇನ್ನು ಮುಂದಿನ ವ್ಯಾಸಂಗವನ್ನು ಪಡೆಯಲು ಅರ್ಹರಾಗಿದ್ದಾರೆ.
ವಿಟ್ಲ ವ್ಯಾಲ್ಯೂ ಎಜುಕೇಶನ್ ಸೆಂಟರ್ ನಲ್ಲಿ ಧಾರ್ಮಿಕ ವಿದ್ಯಾಭ್ಯಾಸವನ್ನು ಪಡೆದ ಇವರನ್ನು ಸಂಸ್ಥೆಯ ಪದಾಧಿಕಾರಿಗಳು ಮನೆಗೆ ತೆರಳಿ ಅಭಿನಂದಿಸಿ ಶುಭ ಹಾರೈಸಿದರು.





