ನದಿಯಲ್ಲಿ ಈಜಲು ಹೋದ ಇಬ್ಬರು ಯುವಕರು ಸಾವು
ಮಂಡ್ಯ : ಪ್ರಸಿದ್ಧ ಪ್ರವಾಸಿ ತಾಣವಾದ ಶ್ರೀರಂಗಪಟ್ಟಣ ತಾಲೂಕಿನ ಬಲಮುರಿ ಸಮೀಪದ ಕಾವೇರಿ ನದಿಯಲ್ಲಿ ಈಜಲು ಹೋದ ಮೈಸೂರಿನ ಖಾಸಗಿ ಕಂಪನಿಯ ಇಬ್ಬರು ಯುವ ಉದ್ಯೋಗಿಗಳು ನೀರಿನ ಆಳ ತಿಳಿಯದೇ ಮುಳುಗಿ ಮೃತಪಟ್ಟಿರುವ ದಾರುಣ ಘಟನೆ ಜರುಗಿದೆ.
ಮೈಸೂರು ನಗರದ ಬೆಳಗೊಳ ಕೈಗಾರಿಕಾ ಪ್ರದೇಶದಲ್ಲಿರುವ ಪ್ರಮುಖ ತಂತ್ರಜ್ಞಾನ ಸಂಸ್ಥೆ ‘ಕೇನ್ಸ್ ಟೆಕ್ನಾಲಜಿ’ಯಲ್ಲಿ ಕೆಲಸ ಮಾಡುತ್ತಿದ್ದ ಚಾಮರಾಜನಗರ ಜಿಲ್ಲೆಯ ಸಂತೆಮರಳಿ ಸಮೀಪದ ತಮರವಾಡಿ ಗ್ರಾಮದ ಮೋಹನ್ ಕುಮಾರ್ (21) ಹಾಗೂ ಮೈಸೂರಿನ ಜಯಪುರ ನಿವಾಸಿ, ಕೆಳಹಳ್ಳಿ ಗ್ರಾಮದ ರವಿಚಂದ್ರ (21) ಮೃತಪಟ್ಟ ದುರ್ದೈವಿಗಳಾಗಿದ್ದಾರೆ.





