May 20, 2026

ವಿಟ್ಲ: ದ.ಕ ಜಿಲ್ಲಾ ಮಟ್ಟದ ರೇಷ್ಮೆ ಕೃಷಿ ಮೇಳ: ಸಚಿವ ಕೆ ವೆಂಕಟೇಶ್ ಅವರಿಂದ ಚಾಲನೆ

0
image_editor_output_image59555015-1779298870582

ವಿಟ್ಲ: ಉಡುಪಿ, ಮಂಗಳೂರು ಜಿಲ್ಲೆಯಲ್ಲಿ 30ವರ್ಷದ ಹಿಂದೆ ಶೇ.70ರಷ್ಟು ರೇಷ್ಮೆ ಕೃಷಿಯಿತ್ತು. ಅಡಿಕೆ ಬೆಳೆಗೆ ಪರ್ಯಾಯವಾಗಿ ರೇಷ್ಮೆಯನ್ನು ಅಭಿವೃದ್ಧಿ ಪಡಿಸಬಹುದಾಗಿದೆ. ಹಿಂದಿನ ಹಾಗೂ ಈಗಿನ ರೇಷ್ಮೆ ಬೆಳೆಗೆ ಅಜಗಜಾಂತರ ವ್ಯತ್ಯಾಸವಿದೆ. ರೇಷ್ಮೆ ಕೃಷಿಗೆ ಉತ್ತೇಜನ ನೀಡುವ ನಿಟ್ಟಿನಲ್ಲಿ ಕಾರ್ಯಕ್ರಮ ಹಾಕಿಕೊಳ್ಳಲಾಗಿದೆ ಎಂದು ರೇಷ್ಮೆ ಇಲಾಖೆಯ ಸಚಿವ ಕೆ. ವೆಂಕಟೇಶ್ ಹೇಳಿದರು.

ವಿಠಲ ಪದವಿಪೂರ್ವ ಕಾಲೇಜು ಸುವರ್ಣ ರಂಗಮಂದಿರದಲ್ಲಿ ದ.ಕ. ಜಿಲ್ಲಾ ಪಂಚಾಯತಿ ರೇಷ್ಮೆ ಇಲಾಖೆ, ಭಾರತ ಕೃಷಿ ಅಭಿವೃದ್ಧಿ ಸಂಸ್ಥೆಯ ವತಿಯಿಂದ ದ.ಕ. ಜಿಲ್ಲಾ ಮಟ್ಟದ ರೇಷ್ಮೆ ಕೃಷಿ ಮೇಳ ಉದ್ಘಾಟಿಸಿ ಮಾತನಾಡಿದರು.

ಮೈಸೂರು ರೇಷ್ಮೆ ಇಲಾಖೆ ಜಂಟಿ ನಿರ್ದೇಶಕಿ ಪ್ರತಿಭಾ ಮಾತನಾಡಿ ರಾಷ್ಟ್ರೀಯ ಮಾರುಕಟ್ಟೆಯಲ್ಲಿ ಪೈಪೋಪಿ ನೀಡಲು ರೇಷ್ಮೆ ಕೃಷಿಗೆ ಮುಂದಾಗಬೇಕಾಗಿದೆ. ರೇಷ್ಮೆಯ ಕೃಷಿಯಲ್ಲಿ ಆಧುನಿಕತೆಯನ್ನು ತರಲಾಗಿದ್ದು, ಇದರ ಅಳವಡಿಯಿಂದ ರೈತರು ಆದಾಯ ಹೆಚ್ಚಿಸಬಹುದು. ಸಮಗ್ರ ಹಾಗೂ ಸಾವಯವ ಕೃಷಿಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ. ಘಟಕ ನಿರ್ಮಾಣ ಮಾಡುವವರಿಗೆ ಇಲಾಖೆಯಿಂದ ಆರ್ಥಿಕ ನೆರವು ನೀಡಲಾಗುವುದು ಎಂದರು.

ಮುರುವ ಮಹಾಬಲ ಭಟ್, ರೇಷ್ಮೆ ಕೃಷಿಯಲ್ಲಿ ಅನುಭವಿ ಮಮತಾ ರೈ ದೇವಸ್ಯ, ಮಿಶ್ರ ಕೃಷಿಕ ನವೀನ್ ಚಾಕಬಾಯ್ ಸುಳ್ಯ ಅವರನ್ನು ಸನ್ಮಾನಿಸಲಾಯಿತು.

ಉದ್ಯಮಿ ಸುರೇಶ್ ಶೆಟ್ಟಿ, ಸುದ್ದಿ ಸಮೂಹ ಸಂಸ್ಥೆಯ ಮುಖ್ಯಸ್ಥ ಡಾ. ಶಿವಾನಂದ, ಪಶುಸಂಗೋಪನಾ ಇಲಾಖೆಯ ಉಪ ನಿರ್ದೇಶಕ ಅರುಣ್‌ಕುಮಾರ್ ಶೆಟ್ಟಿ, ರೈತ ಸಂಘದ ಜಿಲ್ಲಾಧ್ಯಕ್ಷ ಶ್ರೀಧರ ಶೆಟ್ಟಿ ಬೈಲುಗುತ್ತು, ಕೃಷಿ ಅಭಿವೃದ್ಧಿ ಸಂಸ್ಥೆಯ ವ್ಯವಸ್ಥಾಪನಾ ನಿರ್ದೇಶಕ ಎಂ. ಪ್ರಸಾದ್ ಶೆಟ್ಟಿ, ಪ್ರೀತಮ್ ಸೀಕ್ವೇರಾ ಉಪಸ್ಥಿತರಿದ್ದರು.

ಸುಮಿತ್ ಮಸ್ಕರೇನಿಯಸ್ ಸ್ವಾಗತಿಸಿದರು. ನಾಗರಾಜ ಬನ್ನೂರು ವಂದಿಸಿದರು. ಮೋಹಿನಿ ವಿಶ್ವನಾಥ ಕಾರ್ಯಕ್ರಮ ನಿರೂಪಿಸಿದರು.

Leave a Reply

Your email address will not be published. Required fields are marked *

error: Content is protected !!