May 20, 2026

ಕೇರಳದ ‘ನೂತನ ಸಿಎಂ’ ಸತೀಶನ್ ವಿಡಿಯೋ ವೈರಲ್: ಜಾಲತಾಣಗಳಲ್ಲಿ ‘ಪೂಕಿ ಸಿಎಂ’ ಟ್ರೆಂಡ್!

0
image_editor_output_image1821834187-1779264075816.jpg

ತಿರುವನಂತಪುರಂ: ಕೇರಳದಲ್ಲಿ ಕಾಂಗ್ರೆಸ್ ನೇತೃತ್ವದ ಯುಡಿಎಫ್ (UDF) ಮೈತ್ರಿಕೂಟ ಅಧಿಕಾರಕ್ಕೆ ಬಂದ ಬೆನ್ನಲ್ಲೇ, ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿರುವ ವಿ. ಡಿ. ಸತೀಶನ್ (V. D. Satheesan) ಅವರು ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಸೌಂಡ್ ಮಾಡುತ್ತಿದ್ದಾರೆ.

ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡ ನಂತರ ಅವರ ವಿಭಿನ್ನ ಹಾವಭಾವ ಹಾಗೂ ಮುಗುಳ್ನಗೆಯ ವಿಡಿಯೋಗಳು ಇಂಟರ್ನೆಟ್‌ನಲ್ಲಿ ತರಂಗ ಎಬ್ಬಿಸಿದ್ದು, ನೆಟ್ಟಿಗರು ಅವರನ್ನು ಪ್ರೀತಿಯಿಂದ ‘ಪೂಕಿ ಸಿಎಂ’ (Pookie CM) ಎಂದು ಕರೆಯುತ್ತಿದ್ದಾರೆ.

ಕಳೆದ ಕೆಲವು ದಿನಗಳಿಂದ ದೆಹಲಿ ಮಟ್ಟದಲ್ಲಿ ನಡೆದ ಸುದೀರ್ಘ ಹೈಡ್ರಾಮಾಕ್ಕೆ ತೆರೆ ಎಳೆದು ಮುಖ್ಯಮಂತ್ರಿ ಗದ್ದುಗೆ ಏರಿರುವ ಸತೀಶನ್, ಪ್ರಮಾಣ ವಚನ ಸ್ವೀಕಾರ ಸಮಾರಂಭದ ಬಳಿಕ ಮಾಧ್ಯಮಗಳೊಂದಿಗೆ ಹಾಗೂ ಪಕ್ಷದ ನಾಯಕರೊಂದಿಗೆ ಅತ್ಯಂತ ಹಸನ್ಮುಖಿಯಾಗಿ ಸಂವಹನ ನಡೆಸಿದ್ದರು. ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ಸಮ್ಮುಖದಲ್ಲಿ ನಡೆದ ಈ ಸಮಾರಂಭದ ವೇಳೆ ಸತೀಶನ್ ಅವರ ಮುದ್ದಾದ ಮುಖಭಾವದ (Cute Expression) ತುಣುಕುಗಳನ್ನು ನೆಟ್ಟಿಗರು ‘ರೀಲ್ಸ್’ ಹಾಗೂ ‘ಶಾರ್ಟ್ಸ್’ ರೂಪದಲ್ಲಿ ವೈರಲ್ ಮಾಡುತ್ತಿದ್ದಾರೆ.

Leave a Reply

Your email address will not be published. Required fields are marked *

error: Content is protected !!