May 19, 2026

ಮಡಿಕೇರಿ: ಆನೆಗಳ ಕಾದಾಟದಲ್ಲಿ ಗಾಯಗೊಂಡಿದ್ದ ‘ಮಾರ್ತಾಂಡ’ ಆನೆ ಸಾವು

0
image_editor_output_image-2116648858-1779183394914.jpg

ಮಡಿಕೇರಿ: ಕೊಡಗಿನ ಪ್ರಸಿದ್ಧ ದುಬಾರೆ ಸಾಕಾನೆ ಶಿಬಿರದಲ್ಲಿ ಸೋಮವಾರ ನಡೆದ ಭೀಕರ ಕಾದಾಟದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ‘ಮಾರ್ತಾಂಡ’ ಆನೆ ಇಂದು ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದೆ.

ಸೋಮವಾರ ಕಂಜನ್ ಆನೆ ಹಾಗೂ ಮಾರ್ತಾಂಡ ಆನೆ ಕಾದಾಟದಲ್ಲಿ ಮಹಿಳೆಯೊಬ್ಬರು ಬಲಿಯಾಗಿದ್ದರು. ಕಾದಾಟದಲ್ಲಿ ಕಂಜನ್ ಆನೆ ಮಾರ್ತಾಂಡ ಆನೆಯ ಹೊಟ್ಟೆ, ಕಿವಿ ಹಾಗೂ ಇತರೆ ಭಾಗಗಳಿಗೆ ತಿವಿದು ಗಾಯ ಗೊಳಿಸಿತ್ತು. ತೀವ್ರ ಗಾಯಗೊಂಡಿದ್ದ ಮಾರ್ತಾಂಡ ಆನೆಗೆ ದುಬಾರೆ ಸಾಕಾನೆ ಶಿಬಿರದಲ್ಲಿ ಡಾ.ಮುಜಿಭ್ ಹಾಗೂ ಚಿಟ್ಟಿಯಪ್ಪ ಚಿಕಿತ್ಸೆ ನೀಡುತ್ತಿದ್ದರು. ಆದರೆ ಚಿಕಿತ್ಸೆ ಫಲಿಸದೇ ಮಾರ್ತಾಂಡ ಆನೆ ಮೃತಪಟ್ಟಿದೆ.

ಅತ್ಯಂತ ಸೌಮ್ಯ ಸ್ವಭಾವದ, ಪ್ರವಾಸಿಗರ ಪ್ರೀತಿಯ ಆನೆಯಾಗಿದ್ದ ಮಾರ್ತಾಂಡ ಹೀಗೆ ದಾರುಣವಾಗಿ ಅಂತ್ಯ ಕಂಡಿರುವುದು ಇಡೀ ದುಬಾರೆ ಶಿಬಿರ ಹಾಗೂ ಆನೆ ಪ್ರೇಮಿಗಳಲ್ಲಿ ತೀವ್ರ ಕಣ್ಣೀರು ತರಿಸಿದೆ. ಆನೆಗಳ ಕಾದಾಟದಲ್ಲಿ ಮಹಿಳೆ ಬಲಿ ಪ್ರಕರಣ

ಸಂಬಂಧ ಇಂದು ದುಬಾರೆ ಸಾಕಾನೆ ಶಿಬಿರವನ್ನು ತಾತ್ಕಾಲಿಕವಾಗಿ ಬಂದ್ ಮಾಡಲಾಗಿದೆ. ಮುಂದಿನ ಆದೇಶದವರೆಗೂ ದುಬಾರೆ ಬಂದ್ ಆಗಲಿದೆ. ಇನ್ನು ಆನೆಗಳ ಕಾದಾಟದಲ್ಲಿ ಮೃತಪಟ್ಟ ಮಹಿಳೆಯ ನೇತ್ರದಾನ ಮಾಡಿ ಕುಟುಂಬಸ್ಥರು ಮಾನವೀಯತೆ ಮೆರೆದಿದ್ದಾರೆ. ಸದ್ಯ ಮಹಿಳೆಯ ಮೃತದೇಹವನ್ನು ಚೆನ್ನೈಗೆ ರವಾನಿಸಲಾಗಿದೆ.‌

Leave a Reply

Your email address will not be published. Required fields are marked *

error: Content is protected !!