ಶಿವಮೊಗ್ಗ: ಬೈಕ್ ಢಿಕ್ಕಿಯಾಗಿ ಪಾಲಿಕೆ ನೌಕರ ಸಾವು
ಶಿವಮೊಗ್ಗ: ನಗರದ ಅಯ್ಯೋಳ ಸರ್ಕಲ್ ಬಳಿ ವೇಗದ ಬಂದ ಬೈಕೊಂದು ಪಾದಚಾರಿಗೆ ಡಿಕ್ಕಿ ಹೊಡೆದಿದ್ದು ಪಾದಚಾರಿ ಸ್ಥಳದಲ್ಲಿಯೇ ಸಾವನಪ್ಪಿದ್ದಾರೆ.
ಸಾವನಪ್ಪಿದ ವ್ಯಕ್ತಿಯನ್ನು ಪಾಲಿಕೆ ನೌಕರ ರಂಗನಾಥ್ ಎಂದು ಗುರುತಿಸಲಾಗಿದೆ. ಘಟನೆ ಶಿವಮೊಗ್ಗ ನಗರದ ಅಲ್ಲೋಳ ಸರ್ಕಲ್ ಸಮೀಪ ಇರುವ ಶ್ರೀನಿಧಿ ವೈನ್ಸ್ ಬಳಿ ನಡೆದಿದ್ದು, ರಸ್ತೆ ದಾಟುತ್ತಿದ್ದ ರಂಗನಾಥ್ ಅವರಿಗೆ ವೇಗವಾಗಿ ಬಂದ ಬೈಕ್ ಸವಾರ ಡಿಕ್ಕಿ ಹೊಡೆದಿದ್ದಾನೆ.
ಅಪಘಾತದ ರಭಸಕ್ಕೆ ರಂಗಣ್ಣ ಅವರು ರಸ್ತೆಗೆ ಬಿದ್ದು ತೀವ್ರವಾಗಿ ಗಾಯಗೊಂಡಿದ್ದರು, ತಕ್ಷಣ ಅವರನ್ನು ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆಸ್ಪತ್ರೆಗೆ ಸಾಗಿಸುವಾಗ ಮಾರ್ಗ ಮಧ್ಯೆದಲ್ಲಿ ಸಾವನ್ನಪ್ಪಿದ್ದಾರೆ ವೈದ್ಯರು ತಿಳಿಸಿದ್ದಾರೆ.
ಶಿವಮೊಗ್ಗ ಟ್ರಾಫಿಕ್ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.





