ಸಚಿವ ಡಿ.ಸುಧಾಕರ್ ನಿಧನ
ಚಿತ್ರದುರ್ಗ: ಯೋಜನೆ ಮತ್ತು ಸಾಂಖ್ಯಿಕ ಇಲಾಖೆಯ ಸಚಿವ ಡಿ. ಸುಧಾಕರ್ ಅವರು ರವಿವಾರ ಬೆಳಗಿನಜಾವ ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಡಿಯಲ್ಲಿರುವ ಕಿಮ್ಸ್ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.
ತೀವ್ರ ಅನಾರೋಗ್ಯ ಹಾಗು ಶ್ವಾಸಕೋಶ ಸೋಂಕಿನಿಂದ ಬಳಲುತ್ತಿದ್ದ ಸಚಿವ ಡಿ.ಸುಧಾಕರ್ ಬೆಂಗಳೂರಿನ ಕಿಮ್ಸ್ ಆಸ್ಪತ್ರೆಯಲ್ಲಿ ಕಳೆದ ಒಂದು ತಿಂಗಳಿನಿಂದ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗಿದೆ ಇಂದು ನಸುಕಿನ ಜಾವ 3 ಗಂಟೆ 15 ನಿಮಿಷಕ್ಕೆ ನಿಧನರಾಗಿದ್ದಾರೆ.
1961 ಮಾರ್ಚ್ 28ರಂದು ಸಚಿವ ಡಿ ಸುಧಾಕರ್ ಎನ್ ದಶರಥ ಹಾಗೂ ಕಾಂಚನಮಾಲಮ್ಮ ಪುತ್ರರಾಗಿ ಜನಿಸುತ್ತಾರೆ. ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ಪಟ್ಟಣದಲ್ಲಿ ಪ್ರಾಥಮಿಕ ಹಾಗು ಪ್ರೌಢ ಶಿಕ್ಷಣ ಪೂರೈಸುತ್ತಾರೆ ಶಿವಮೊಗ್ಗದ ನ್ಯಾಷನಲ್ ಕಾಲೇಜಿನಲ್ಲಿ ಬಿಕಾಂ ಕಂಪ್ಲೀಟ್ ಮಾಡುತ್ತಾರೆ. ತಂದೆಯಿಂದ ಲಿಕ್ಕರ್ ಉದ್ಯಮ ಹಾಗೂ ಕೃಷಿ ಕೆಲಸ ಬಳುವಳಿಯಾಗಿ ಬಂದಿತ್ತು.
1978 ಮತ್ತು 1989 ರಲ್ಲಿ ಚಳ್ಳಕೆರೆ ಕ್ಷೇತ್ರದ ಶಾಸಕರಾಗಿದ್ದ ಎಂ ಜಯಣ್ಣ ಅವರಿಂದ ರಾಜಕೀಯ ಪಾಠ ಕಲಿತ ಡಿ ಸುಧಾಕರ್, 2004ರಲ್ಲಿ ಚಳ್ಳಕೆರೆ ಕ್ಷೇತ್ರದ ಕಾಂಗ್ರೆಸ್ ಶಾಸಕರಾಗಿ ಸೇವೆ ಸಲ್ಲಿಸಿದ್ದಾರೆ.
ಚಳ್ಳಕೆರೆ ಎಸ್ ಟಿ ಮೀಸಲು ಕ್ಷೇತ್ರವಾದ ಹಿನ್ನೆಲೆಯಲ್ಲಿ ಹಿರಿಯೂರಿಗೆ ಶಿಫ್ಟ್ ಮಾಡಲಾಗಿತ್ತು. 2008ರಲ್ಲಿ ಹಿರಿಯೂರು ಕ್ಷೇತ್ರದ ಪಕ್ಷೇತರ ಶಾಸಕರಾಗಿ ಆಯ್ಕೆಯಾಗುತ್ತಾರೆ. ಬಿಜೆಪಿಯನ್ನು ಬೆಂಬಲಿಸಿ, ಮೊದಲ ಸಲ ಸಚಿವ ಸ್ಥಾನ ಪಡೆದಿದ್ದರು. ಯಡಿಯೂರಪ್ಪ ಸಂಪುಟದಲ್ಲಿ ಸಮಾಜ ಕಲ್ಯಾಣ ಮತ್ತು ಮುಜರಾಯಿ ಇಲಾಖೆ ಸಚಿವರಾಗಿ ಸೇವೆ ಸಲ್ಲಿಸಿದ್ದಾರೆ. ಬಂದಿಖಾನೆ ಹಾಗೂ ಯುವಜನ ಸೇವೆ ಸಚಿವರಾಗಿಯೂ ಕೂಡ ಸೇವೆ ಸಲ್ಲಿಸಿದ್ದಾರೆ. ಬಳಿಕ 2010ರಲ್ಲಿ ಇಡೀ ಸುಧಾಕರ್ ಸೇರಿದಂತೆ 14 ಶಾಸಕರು ಅನರ್ಹ ಆದ ಹಿನ್ನೆಲೆ ಕೋರ್ಟ್ ಮೊರೆ ಹೋಗಿ ಡಿ ಸುಧಾಕರ್ ತಮ್ಮ ಶಾಸಕ ಸ್ಥಾನ ಉಳಿಸಿಕೊಂಡಿದ್ದರು. 2013ರಲ್ಲಿ ಕಾಂಗ್ರೆಸ್ ಸೇರ್ಪಡೆಯಾಗಿ ಹಿರಿಯೂರಿನಿಂದ ಮತ್ತೆ ಗೆಲುವು ಸಾಧಿಸಿ 2018ರಲ್ಲಿ ಪೂರ್ಣಿಮಾ ಶ್ರೀನಿವಾಸ್ ವಿರುದ್ಧ ಸೋತಿದ್ದರು.
ಬಳಿಕ 2023ರಲ್ಲಿ ಹಿರಿಯೂರು ಕ್ಷೇತ್ರದಿಂದ ಗೆದ್ದು ಸಚಿವರಾಗಿದ್ದರು. 2023 ಮೇ 27 ರಂದು ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದ್ದರು. ಸದ್ಯ ಯೋಜನೆ ಮತ್ತು ಸಾಂಖ್ಯಿಕ ಇಲಾಖೆಯ ಸಚಿವರಾಗಿದ್ದರು. ಚಿತ್ರದುರ್ಗದ ಡಿಸಿಸಿ ಬ್ಯಾಂಕ್ ಅಧ್ಯಕ್ಷರು ಆಗಿದ್ದರು. ಒಟ್ಟು 5 ಬಾರಿ ವಿಧಾನಸಭೆ ಚುನಾವಣೆಯೇ ಡಿ ಸುಧಾಕರ್ ಎದುರಿಸಿದ್ದರು. ನಾಲ್ಕು ಬಾರಿ ಗೆಲುವು ಕಂಡಿದ್ದು 2018 ರ ಚುನಾವಣೆಯಲ್ಲಿ ಮಾತ್ರ ಸುಧಾಕರ್ ಸೋತಿದ್ದರು. ರಾಜಕೀಯ ಚತುರತೆಯಿಂದ ಸುಧಾಕರ್ ನಾಲ್ಕು ಬಾರಿ ಗೆಲುವು ದಾಖಲಿಸಿದ್ದರು. ಬರಗಾಲದ ವೇಳೆ ಜಾನುವಾರುಗಳಿಗೆ ಮೇವು ಪೂರೈಸಿದ್ದರು. ಡಿಸಿಎಂ ಡಿಕೆ ಶಿವಕುಮಾರ್ ಆಪ್ತ ವಲಯದಲ್ಲಿ ಕೂಡ ಇವರು ಗುರುತಿಸಿಕೊಂಡಿದ್ದರು.





