ಪಂಚ ರಾಜ್ಯಗಳ ಚುನಾವಣೆಯಲ್ಲಿ ಅಚ್ಚರಿ ಫಲಿತಾಂಶ: ತಮಿಳುನಾಡಿನಲ್ಲಿ TVK, ಅಸ್ಸಾಂ, ಪಶ್ಚಿಮ ಬಂಗಾಳದಲ್ಲಿ BJP, ಕೇರಳದಲ್ಲಿ 10 ವರ್ಷಗಳ ಬಳಿಕ UDF ಅಲೆ
ತೀವ್ರ ಕುತೂಹಲ ಕೆರಳಿಸಿದ್ದ ಪಂಚ ರಾಜ್ಯಗಳ ಚುನಾವಣೆಯಲ್ಲಿ ಅಚ್ಚರಿ ಫಲಿತಾಂಶಗಳು ಹೊರ ಬೀಳುತ್ತಿದ್ದು, ತಮಿಳುನಾಡಿನಲ್ಲಿ ನಟ ವಿಜಯ್ ಅವರ ಟಿವಿಕೆ ದ್ರಾವಿಡ ಪಕ್ಷಗಳಿಗೆ ಆಘಾತ ನೀಡಿದೆ.
ಅಂತೆಯೇ ಬಿಜೆಪಿ ಪಶ್ಚಿಮ ಬಂಗಾಳ ಮತ್ತು ಅಸ್ಸಾಂ ಅನ್ನು ಕ್ಲೀನ್ ಸ್ವೀಪ್ ಮಾಡಿದ್ದು, ಕೇರಳದಲ್ಲಿ 10 ವರ್ಷಗಳ ಬಳಿಕ ಯುಡಿಎಫ್ ಅಲೆ ಆರಂಭವಾಗಿದೆ. ಇತ್ತೀಚಿನ ಟ್ರೆಂಡ್‌ಗಳು ಪಶ್ಚಿಮ ಬಂಗಾಳ ಮತ್ತು ಅಸ್ಸಾಂನಲ್ಲಿ ಬಿಜೆಪಿ ಪ್ರಬಲ ಮುನ್ನಡೆ ಸಾಧಿಸಿದೆ. ಆದರೆ ನಟ ವಿಜಯ್ ಅವರ ಟಿವಿಕೆ ತಮಿಳುನಾಡಿನಲ್ಲಿ ಡಿಎಂಕೆ ಮತ್ತು ಎಐಎಡಿಎಂಕೆಗಿಂತ ಅಚ್ಚರಿಯ ಮುನ್ನಡೆ ಸಾಧಿಸಿದ್ದು, ಅಧಿಕಾರ ರಚನೆಯತ್ತ ದಾಪುಗಾಲಿರಿಸಿದ್ದಾರೆ.
ಪೆರಂಬೂರ್ ಮತ್ತು ತಿರುಚಿ ಪೂರ್ವ ಎರಡೂ ಕ್ಷೇತ್ರಗಳಲ್ಲಿ ವಿಜಯ್ ಮುಂದಿದ್ದಾರೆ, ಆದರೆ ಮುಖ್ಯಮಂತ್ರಿ ಎಂಕೆ ಸ್ಟಾಲಿನ್ ಹಲವಾರು ಡಿಎಂಕೆ ಮಂತ್ರಿಗಳೊಂದಿಗೆ ಕೊಳತ್ತೂರಿನಲ್ಲಿ ಹಿಂದುಳಿದಿದ್ದಾರೆ. ಎಐಎಡಿಎಂಕೆ ಮುಖ್ಯಸ್ಥ ಎಡಪ್ಪಾಡಿ ಕೆ ಪಳನಿಸ್ವಾಮಿ ಎಡಪ್ಪಾಡಿಯಲ್ಲಿ ಮುನ್ನಡೆಯಲ್ಲಿದ್ದರೆ, ಬಿಜೆಪಿ ರಾಜ್ಯ ಮುಖ್ಯಸ್ಥ ನೈನಾರ್ ನಾಗೇಂದ್ರನ್ ಸತ್ತೂರಿನಲ್ಲಿ ಹಿನ್ನಡೆಯಲ್ಲಿದ್ದಾರೆ.
ಈ ಅಂಕಿಅಂಶಗಳು ಚುನಾವಣಾ ಆಯೋಗ ಮತ್ತು ಟಿವಿ ಚಾನೆಲ್‌ಗಳ ಟ್ರೆಂಡ್‌ಗಳನ್ನು ಆಧರಿಸಿವೆ, ಚುನಾವಣಾ ಸಂಸ್ಥೆ ಇನ್ನೂ ಯಾವುದೇ ಅಧಿಕೃತ ಸಂಖ್ಯೆಗಳನ್ನು ಘೋಷಿಸಿಲ್ಲ.





