June 21, 2026

ಭಾರೀ ಕುತೂಹಲದಲ್ಲಿರುವ ಕಾಸರಗೋಡು ವಿಧಾನಸಭೆ: ಯುಡಿಎಫ್ ಅಭ್ಯರ್ಥಿ ಮಾಹಿನ್ ಹಾಜಿ ಮುನ್ನಡೆ

0
image_editor_output_image-2046170974-1777876662028.jpg

ಕಾಸರಗೋಡು: ಭಾರೀ ಕುತೂಹಲದಲ್ಲಿರುವ ಕಾಸರಗೋಡು ವಿಧಾನಸಭೆ ಕ್ಷೇತ್ರದಲ್ಲಿ ಯುಡಿಎಫ್ ಅಭ್ಯರ್ಥಿ ಮಾಹಿನ್ ಹಾಜಿ ಮುನ್ನಡೆ ಸಾಧಿಸಿದ್ದಾರೆ. ಕಾಸರಗೋಡು ವಿಧಾನಸಭಾ ಕ್ಷೇತ್ರದ ಮತ ಎಣಿಕೆ ಬಿರುಸಿನಿಂದ ಸಾಗಿದ್ದು, ಎನ್ ಡಿಎ ಮತ್ತು ಯುಡಿಎಫ್ ಮಧ್ಯೆ ತೀವ್ರ ಸ್ಪರ್ಧೆ ಕಂಡುಬರುತ್ತಿದೆ.

ಬಿಜೆಪಿ ಅಭ್ಯರ್ಥಿ ಅಶ್ವಿನಿ ಎಂಎಲ್ 8ನೇ ಹಂತದ ಮತ ಎಣಿಕೆಯ ನಂತರ ಸಾವಿರಕ್ಕೂ ಅಧಿಕ ಮತದಲ್ಲಿ ಮುನ್ನಡೆ ಕಾಯ್ದುಕೊಂಡಿದ್ದರು.

ಇದೀಗ 9ನೇ ಹಂತದ ಮತ ಎಣಿಕೆ ಬಳಿಕ ಮುಸ್ಲಿಂ ಲೀಗ್‌ ಕಲ್ಲಟ್ರ ಮಾಹೀನ್‌ ಹಾಜಿ 6198 ಮತಗಳನ್ನು ಪಡೆದು ಮುನ್ನಡೆ ಸಾಧಿಸಿದ್ದಾರೆ.
ಬಿಜೆಪಿಯ ಅತೀ ನೀರಿಕ್ಷಿತ ಕ್ಷೇತ್ರಗಳಲ್ಲಿ ಒಂದಾಗಿರುವ ಕಾಸರಗೋಡು ಕ್ಷೇತ್ರ ಯಾರಿಗೆ ಒಲಿಯಲಿದೆ ಎನ್ನುವುದು ಕಾದು ನೋಡಬೇಕಿದೆ.

Leave a Reply

Your email address will not be published. Required fields are marked *

error: Content is protected !!