ಅಂಚೆ ಮತಗಳ ಮರುಎಣಿಕೆ: ಶೃಂಗೇರಿ ವಿಧಾನಸಭಾ ಕ್ಷೇತ್ರದ ಶಾಸಕರಾಗಿ ಡಿ.ಎನ್. ಜೀವರಾಜ್
ಚಿಕ್ಕಮಗಳೂರು: ಶೃಂಗೇರಿ ವಿಧಾನಸಭಾ ಕ್ಷೇತ್ರದ ಶಾಸಕರಾಗಿ ಆಯ್ಕೆಯಾದ ಡಿ.ಎನ್. ಜೀವರಾಜ್ ಅವರಿಗೆ ಚುನಾವಣಾಧಿಕಾರಿ ಗೌತಮ್ ಕುಮಾರ್ ಶೆಟ್ಟಿ ಅವರು ಸೋಮವಾರ ಅಧಿಕೃತವಾಗಿ ಶಾಸಕ ಸ್ಥಾನ ಪ್ರಮಾಣಪತ್ರವನ್ನು ಹಸ್ತಾಂತರಿಸಿದರು.
ಶನಿವಾರ ನಡೆದ ಅಂಚೆ ಮತಗಳ ಮರುಎಣಿಕೆ ಪ್ರಕ್ರಿಯೆಯಲ್ಲಿ ಅಂತಿಮವಾಗಿ ಡಿ.ಎನ್. ಜೀವರಾಜ್ ಅವರು ಟಿ.ಡಿ. ರಾಜೇಗೌಡಗಿಂತ 52 ಮತಗಳ ಅಂತರದಿಂದ ಬಹುಮತ ಪಡೆದಿದ್ದರು. ಆದರೆ, ಅಂದು ಅಧಿಕೃತ ಘೋಷಣೆ ಮಾಡಲಾಗಿರಲಿಲ್ಲ. ಹೈಕೋರ್ಟ್‌ಗೆ ಮರುಎಣಿಕೆಯ ವರದಿ ಸಲ್ಲಿಸುವುದಾಗಿ ಚುನಾವಣಾಧಿಕಾರಿಗಳು ತಿಳಿಸಿದ್ದರು.





