May 2, 2026

ಪತ್ನಿಯ ಅನೈತಿಕ ಸಂಬಂಧ ಆರೋಪ: ಮನನೊಂದು ಸಾಫ್ಟ್‌ವೇರ್ ಎಂಜಿನಿಯರ್ ಆತ್ಮಹತ್ಯೆ

0
image_editor_output_image1032071778-1777702744136.jpg

ಹೈದರಾಬಾದ್: ಪತ್ನಿಯು ಮೂವರು ಪುರುಷರೊಂದಿಗೆ ಅನೈತಿಕ ಸಂಬಂಧ ಹೊಂದಿದ್ದಾಳೆ ಎಂದು ಆರೋಪಿಸಿ ಸಾಫ್ಟ್‌ವೇರ್ ಎಂಜಿನಿಯರ್ ಸೀತಾರಾಮ್ (36) ಎಂಬವರು ಹುಸೇನ್ ಸಾಗರ್ ಸರೋವರಕ್ಕೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಆತ್ಮಹತ್ಯೆಗೂ ಮುನ್ನ ಅವರು ಬರೆದಿಟ್ಟಿರುವ 19 ಪುಟಗಳ ಡೆತ್‌ನೋಟ್‌ನಲ್ಲಿ ಪತ್ನಿಯ ವರ್ತನೆಯ ಬಗ್ಗೆ ಗಂಭೀರ ಆರೋಪಗಳನ್ನು ಮಾಡಿದ್ದಾರೆ.

ಸೀತಾರಾಮ್ ಅವರ ಪತ್ನಿ ರೇಣುಕಾ (30) ಕಳೆದ ಒಂದೂವರೆ ವರ್ಷಗಳಿಂದ ಮೂವರು ಪುರುಷರೊಂದಿಗೆ ಸಂಬಂಧ ಹೊಂದಿದ್ದರು ಎಂದು ಡೆತ್‌ನೋಟ್‌ನಲ್ಲಿ ಉಲ್ಲೇಖಿಸಲಾಗಿದೆ. ಈ ಪೈಕಿ ರಮಣ ಎಂಬಾತ ರೇಣುಕಾ ಜೊತೆಗಿದ್ದ ಖಾಸಗಿ ಕ್ಷಣಗಳನ್ನು ರೆಕಾರ್ಡ್ ಮಾಡಿ ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದ.

ಈ ವಿಡಿಯೋಗಳನ್ನು ಆನ್‌ಲೈನ್‌ನಲ್ಲಿ ನೋಡಿದ ನಂತರ ಸೀತಾರಾಮ್ ತೀವ್ರವಾಗಿ ನೊಂದಿದ್ದರು. ತಾನು ಇಲ್ಲದ ಸಮಯದಲ್ಲಿ ವ್ಯಕ್ತಿಗಳು ಮನೆಗೆ ಭೇಟಿ ನೀಡುತ್ತಿದ್ದರು ಎಂದೂ ಅವರು ಬರೆದಿದ್ದಾರೆ.

“ನನ್ನ ಪತ್ನಿಯನ್ನು ನಾನು ಚೆನ್ನಾಗಿ ನೋಡಿಕೊಂಡಿದ್ದೆ, ಆದರೆ ಆಕೆಯ ದ್ರೋಹದಿಂದ ನನಗೆ ನೋವಾಗಿದೆ” ಎಂದು ಬರೆದಿಟ್ಟು ಸೀತಾರಾಮ್ ಸಾವನ್ನಪ್ಪಿದ್ದಾರೆ. ಈ ಸಂಬಂಧ ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪದ ಮೇಲೆ ರೇಣುಕಾ ಮತ್ತು ರಮಣ ರೆಡ್ಡಿ ಎಂಬಾತನನ್ನು ಪೊಲೀಸರು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.

Leave a Reply

Your email address will not be published. Required fields are marked *

error: Content is protected !!