ವಿಟ್ಲ: ಕಾನೂನು ಅರಿವು-ನೆರವು ಕಾರ್ಯಕ್ರಮ:
ಕಾನೂನಿನ ಅರಿವು ಇದ್ದಾಗ ಮಾತ್ರ ಸಮಾಜದಲ್ಲಿ ಶಾಂತಿ ಸುವ್ಯವಸ್ಥೆ ನಿರ್ಮಾಣ: ನ್ಯಾಯಾಧೀಶ ಬಾಲಗೋಪಾಲಕೃಷ್ಣ
ವಿಟ್ಲ: ಕಾನೂನಿನ ಅರಿವು ಪ್ರತಿಯೊಬ್ಬರಿಗೂ ಅವಶ್ಯಕತೆಯಿದ್ದು, ಅರಿವಿನೊಂದಿಗೆ ನೆರವು ಪಡೆಯಬೇಕು. ಕಾನೂನಿನ ಅರಿವು ಇದ್ದವರು ಮೋಸ ಮಾಡಲ್ಲ ಮತ್ತು ಮೋಸ ಹೋಗಲ್ಲ. ಕಡ್ಡಾಯ ಶಿಕ್ಷಣದ ಮುಲಕ ವಿದ್ಯಾವಂತ ಸಮಾಜ ನಿರ್ಮಾಣಗೊಳ್ಳುತ್ತದೆ ಎಂದು ಬಂಟ್ವಾಳ ಸಿವಿಲ್ ನ್ಯಾಯಾಧೀಶ ಬಾಲಗೋಪಾಲಕೃಷ್ಣ ಹೇಳಿದರು.
ಅವರು ಬಂಟ್ವಾಳ ತಾಲ್ಲೂಕು ಕಾನೂನು ಸೇವೆಗಳ ಸಮಿತಿ, ಬಂಟ್ವಾಳ ವಕೀಲರ ಸಂಘ, ವಿಠಲ ವಿದ್ಯಾಸಂಘ, ವಿಠಲ ಪದವಿಪೂರ್ವ ಕಾಲೇಜು, ವಿಟ್ಲ ರೋಟರಿ ಕ್ಲಬ್ ಸಂಯುಕ್ತ ಅಶ್ರಯದಲ್ಲಿ ನಡೆದ ಅಜದಿ-ಕಾ ಅಮೃತ ಮಹೋತ್ಸವದ ಪ್ರಯುಕ್ತ ಕಾನೂನು ಅರಿವು-ನೆರವು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಕಾನೂನಿನ ಅರಿವು ಇದ್ದಾಗ ಮಾತ್ರ ಸಮಾಜದಲ್ಲಿ ಶಾಂತಿ ಸುವ್ಯವಸ್ಥೆ ನಿರ್ಮಾಣಗೊಳ್ಳುತ್ತದೆ. ವಿದ್ಯಾರ್ಥಿಗಳು ಮೊಬೈಲ್‌ಗಳನ್ನು ಸಕಾರಾತ್ಮಕ ಮಾಹಿತಿಗಳಿಗೆ ಮಾತ್ರ ಬಳಸಬೇಕು ಎಂದರು.
ನ್ಯಾಯವಾದಿ ದೀಪಕ್ ಪೆರಾಜೆ ಅವರು ಮೋಟಾರು ವಾಹನ ಕಾಯಿದೆ ಬಗ್ಗೆ ಮಾಹಿತಿ ನೀಡಿದರು. ವಿಠಲ ವಿದ್ಯಾ ಸಂಘದ ಅಧ್ಯಕ್ಷ ಮುಗುಳಿ ತಿರುಮಲೇಶ್ವರ ಭಟ್ ಅಧ್ಯಕ್ಷತೆ ವಹಿಸಿದ್ದರು.
ಈ ಸಂದರ್ಭ ಹೆಚ್ಚುವರಿ ಸಿವಿಲ್ ನ್ಯಾಯಾಧೀಶೆ ಶಿಲ್ಪಾ ಜಿ ತಿಮ್ಮಾಪುರ, ವಿಠಲ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಆದರ್ಶ ಚೊಕ್ಕಾಡಿ, ರೋಟರಿ ಕ್ಲಬ್ ವಲಯ ಕಾರ್ಯದರ್ಶಿ ಪಿ ಜಯರಾಮ ರೈ, ಸಹಾಯಕ ಸರ್ಕಾರಿ ಅಭಿಯೋಜಕಿ ಹರಿಣಿಕುಮಾರಿ ಡಿ, ಬಂಟ್ವಾಳ ವಕೀಲರ ಸಂಘದ ಉಪಾಧ್ಯಕ್ಷ ಮೋಹನ್ ಪ್ರಭು, ಶಿಶು ಮತ್ತು ಮಹಿಳಾ ಅಭಿವೃದ್ಧಿ ಯೋಜನಾಧಿಕಾರಿ ಉಷಾ, ವಿಟ್ಲ ಪೊಲೀಸ್ ಠಾಣೆಯ ಪ್ರೋಬೆಷನರಿ ಎಸೈ ಮಂಜುನಾಥ, ವಿಟ್ಲ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಮಾಲಿನಿ, ವಿಠಲ ವಿದ್ಯಾ ಸಂಘದ ಕೋಶಾಧಿಕಾರಿ ಬಾಬು ಕೆ.ವಿ, ಆಡಳಿತಾಧಿಕಾರಿ ಪ್ರಶಾಂತ್, ಸದಸ್ಯರದ ಪದ್ಮಯ್ಯ ಗೌಡ, ಎಂ ನಿತ್ಯಾನಂದ ನಾಯಕ್, ಮೊದಲಾದವರು ಉಪಸ್ಥಿತರಿದ್ದರು.
ವಿಟ್ಲ ರೋಟರಿ ಕ್ಲಬ್ ಅಧ್ಯಕ್ಷ ಅಣ್ಣಪ್ಪ ಸಾಸ್ತಾನ ಸ್ವಾಗತಿಸಿದರು. ಉಪನ್ಯಾಸಕ ಪ್ರಕಾಶ್ ನಿರೂಪಿಸಿದರು.





