February 23, 2026

ಲೈಂಗಿಕ ದೌರ್ಜನ್ಯ: ಜ್ಯೋತಿಷಿ ಕಮಲಾಕರ್ ಭಟ್  ವಿರುದ್ಧ ಪೋಕ್ಸೊ ಪ್ರಕರಣ ದಾಖಲು

0
image_editor_output_image768104742-1771803133066.jpg

ಶಿವಮೊಗ್ಗ: ವಸಂತ್ ನಾಯ್ಕ್ ಹತ್ಯೆ ಪ್ರಕರಣದಲ್ಲಿ ಆರೋಪಿಯಾಗಿರುವ ಜ್ಯೋತಿಷಿ ಕಮಲಾಕರ್ ಭಟ್ ವಿರುದ್ಧ ಪೋಕ್ಸೊ ಪ್ರಕರಣ ದಾಖಲಾಗಿದೆ.

ಈಗಾಗಲೇ ಸಿದ್ದಾಪುರದ ವಸಂತ್ ನಾಯ್ಕ್ ಹತ್ಯೆ ಪ್ರಕರಣದಲ್ಲಿ ಮೂರನೇ ಆರೋಪಿಯಾಗಿರುವ ಕಮಲಾಕರ್ ಭಟ್‌ ವಿರುದ್ಧ ಮಹೇಶ್ ನಾಯ್ಕ್ ಪುತ್ರಿ ಲೈಂಗಿಕ ದೌರ್ಜನ್ಯ ಪ್ರಕರಣ ದಾಖಲಿಸಿದ್ದಾಳೆ.

ಮಹೇಶ್ ನಾಯ್ಕ್ ಪುತ್ರಿ ಸಿದ್ದಾಪುರ ಠಾಣೆಯಲ್ಲಿ ಕಮಲಾಕರ್ ಭಟ್ ವಿರುದ್ಧ ಲೈಂಗಿಕ ದೌರ್ಜನ್ಯ ಕುರಿತು ದೂರು ನೀಡಿದ್ದಳು. ಈ ದೂರನ್ನು ಶಿವಮೊಗ್ಗ ತುಂಗಾನಗರ ಠಾಣೆಗೆ ವರ್ಗಾಯಿಸಲಾಗಿದ್ದು, ಶಿವಮೊಗ್ಗ ತುಂಗಾ ನಗರ ಠಾಣೆಯಲ್ಲಿ ಕಮಲಾಕರ್ ಭಟ್ ವಿರುದ್ಧ ಪೋಕ್ಸೊ ಪ್ರಕರಣ ದಾಖಲು ಮಾಡಲಾಗಿದೆ.

Leave a Reply

Your email address will not be published. Required fields are marked *

error: Content is protected !!