July 2, 2026

ಬಸ್ ಹರಿದು ಯುವತಿ ಸಾವು

0
image_editor_output_image284798172-1770544076028.jpg

ಬೆಂಗಳೂರು: ಬಿಎಂಟಿಸಿ ಬಸ್ ಹರಿದು ಯುವತಿಯೊಬ್ಬಳು ಸಾವನ್ನಪ್ಪಿದ ಘಟನೆ ಬೆಂಗಳೂರಲ್ಲಿ ನಡೆದಿದೆ. ಬೈಕ್ ನಲ್ಲಿ ಹೋಗ್ತಿದ್ದ ಮಹಿಳೆ ಬಸ್‌ಗೆ ಬಲಿಯಾದ ಸಿಸಿಟಿವಿ ಅಪಘಾತದ ದೃಶ್ಯ ಬೆಚ್ಚಿ ಬೀಳಿಸುವಂತಿದೆ.

ಬೆಂಗಳೂರಿಗರ ನೆಚ್ಚಿನ ಸಾರಿಗೆ ಅಂದ್ರೆ ಅದು ಬಿಎಂಟಿಸಿ ಬಸ್‌. ಆದ್ರೆ ಇತ್ತೀಚಿಗೆ ಹೆಚ್ಚಿನ ಸಂಖ್ಯೆಯಲ್ಲಿ ನಡೆಯುತ್ತಿರೋ ಬಿಎಂಟಿಸಿ ಬಸ್ ಆಕ್ಸಿಡೆಂಟ್ ಗಳು, ಅದರಲ್ಲೂ ಎಲೆಕ್ಟ್ರಿಕ್ ಬಸ್ ಅಪಘಾತಗಳು ಜನರಲ್ಲಿ ಭಯವನ್ನುಂಟು ಮಾಡ್ತಿವೆ. ಚಾಲಕರ ಅಜಾಗರೂಕತೆ, ರ‍್ಯಾಶ್‌ ಡ್ರೈವಿಂಗ್‌ ಹಾಗೂ ನಿರ್ಲಕ್ಷ್ಯದಿಂದ ಬಿಎಂಟಿಸಿ ಬಸ್‌ಗಳಿಗೆ ಅನೇಕರು ಬಲಿಯಾಗಿದ್ದಾರೆ.

ಅದರಂತೆ, ನಿನ್ನೆ ಬೆಳ್ಳಿಗ್ಗೆ 9.30 ರಿಂದ 10 ಗಂಟೆ ಸುಮಾರಿಗೆ ಬಿಎಂಟಿಸಿ ಎಲೆಕ್ಟ್ರಿಕ್‌ ಬಸ್‌ಗೆ 20 ವರ್ಷದ ಯುವತಿಯೊಬ್ಬರು ಬಲಿಯಾಗಿದ್ದಾರೆ.

ಮಣಿಪುರದಿಂದ ಬಂದು ಬೆಂಗಳೂರಲ್ಲಿ ಕೆಲಸ ನಿರ್ವಹಿಸುತ್ತಿದ್ದ ಹನ್ನಾ ಇನಕಾ ಸಾವನ್ನಪ್ಪಿದ ಯುವತಿ ಎಂದು ಗುರುತಿಸಲಾಗಿದೆ. ಸಿಲ್ಕ್ ಬೋರ್ಡ್‌ನಿಂದ ಟಿನ್ ಫ್ಯಾಕ್ಟರಿಗೆ ಹೋಗ್ತಿದ್ದ ಇವಿ ಬಸ್, ಕೆ.ಆರ್ ಪುರಂನ ರೈಲ್ವೆ ನಿಲ್ದಾಣದ ಬಳಿ ಬಂದಾಗ, ಬೈಕ್ ನ ಹಿಂಭಾಗದಲ್ಲಿ ಕುಳಿತು ಹನ್ನಾ ಇನಕಾ ಬೈಕ್ ಇವಿ ಬಸ್ ಮುಂದೆ ಬಂದಿದೆ. ಆಗ ಬಸ್ ನ ಮುಂಭಾಗಕ್ಕೆ ಟಚ್ ಆಗಿ ಬೈಕ್ ಬ್ಯಾಲೆನ್ಸ್ ತಪ್ಪಿ ಕೆಳಗೆ ಬಿದ್ದಿದೆ. ಈ ವೇಳೆ ಹಿಂಭಾಗದಲ್ಲಿ ಕುಳಿತ ಯುವತಿ ಬಸ್ ಮುಂಭಾಗದ ಚಕ್ರಕ್ಕೆ ಬಿದ್ದಿದ್ದಾಳೆ. ಆಗ ಯುವತಿಯ ತಲೆ ಮೇಲೆ ಬಿಎಂಟಿಸಿ ಬಸ್ ಹತ್ತಿಸಿದೆ.

ಅಪಘಾತವಾದ ಕೂಡಲೇ ಬಸ್ ಕೆಳಗಡೆ ಬಿದ್ದ ಯುವತಿಯನ್ನ ಕೆ.ಆರ್ ಪುರಂನ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಯ್ತು. ಆದ್ರೇ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾರೆ.

Leave a Reply

Your email address will not be published. Required fields are marked *

You may have missed

error: Content is protected !!