ಬಜಪೆ: ಮೆಹಂದಿ ಕಾರ್ಯಕ್ರಮಕ್ಕೆ ತೆರಳಿದ್ದ ವೇಳೆ 23 ಲಕ್ಷ ರೂ.ಮೌಲ್ಯದ ಚಿನ್ನಾಭರಣ ಕಳವು ಪ್ರಕರಣ: ಇಬ್ಬರು ಆರೋಪಿಗಳ ಬಂಧನ
ಮಂಗಳೂರು: ಬಜಪೆ ಪೊಲೀಸ್ ಠಾಣಾ ವ್ಯಾಪ್ತಿಯ ಕೆಂಜಾರು ಜೋಕಟ್ಟೆಯಲ್ಲಿ ಮೊಹಮ್ಮದ್ ಷರೀಫ್ ರವರು ತನ್ನ ಸಂಬಂಧಿಕರ ಮೆಹಂದಿ ಕಾರ್ಯಕ್ರಮಕ್ಕೆ ಕಳವಾರಿಗೆ ಹೋದಾಗ ರಾತ್ರಿ ಮನೆಯಲ್ಲಿದ್ದ ಸುಮಾರು 23 ಲಕ್ಷ ರೂಪಾಯಿ ಮೌಲ್ಯದ ಚಿನ್ನಾಭರಣ ಮತ್ತು 1,25,000/- ರೂಪಾಯಿ ನಗದು ಹಣ ಕಳ್ಳತನವಾಗಿರುತ್ತದೆ. ಈ ಬಗ್ಗೆ ಬಜಪೆ ಪೊಲೀಸ್ ಠಾಣೆಯಲ್ಲಿ ಮೊ.ನಂ 176/2025 ಕಲಂ ಕಲಂ 331(3), 331(4), 305 BNS 2023 ರಂತೆ ಪ್ರಕರಣ ದಾಖಲಾಗಿರುತ್ತದೆ.
ಪ್ರಕರಣದಲ್ಲಿ ಬಜಪೆ ಪೊಲೀಸರು ಆರೋಪಿತರ ಪತ್ತೆ ಪ್ರಯತ್ನಿಸಿದಾಗ ಅಬ್ದುಲ್ ನಾಸರ್ @ ನಾಸಿರ್ @ ನಾಚಿ (31), ತಂದೆ:- ಯೂಸುಫ್, ವಾಸ:- ಕಳವಾರು ಚರ್ಚ್ ಬಳಿ ಮನೆ, ಕಳವಾರು ಅಂಚೆ, ಬಾಳ ಗ್ರಾಮ, ಮಂಗಳೂರು ತಾಲೂಕು, ಪ್ರಸ್ತುತ ವಿಳಾಸ:- ಬಾಡಿಗೆ ಮನೆ, ಜರಿನಗರ, ಬಜಪೆ ಗ್ರಾಮ ಮತ್ತು ಅಂಚೆ, ಮಂಗಳೂರು ತಾಲೂಕು ಎಂಬಾತನು ಕಳ್ಳತನ ಮಾಡಿ ವಿದೇಶಕ್ಕೆ ಹೋಗಿ ತಲೆಮರೆಸಿಕೊಂಡಿರುವ ಬಗ್ಗೆ ಮಾಹಿತಿಯನ್ನು ಸಂಗ್ರಹಿಸಿ LOC ಹೊರಡಿಸಲಾಗಿರುತ್ತದೆ. ಅಬ್ದುಲ್ ನಾಸೀರ್ @ ನಾಚಿ ಎಂಬಾತನನ್ನು LOC ಯಲ್ಲಿ ಪತ್ತೆ ಮಾಡಿ ವಿಚಾರಣೆ ನಡೆಸಿದಾಗ ಪ್ರಕರಣದ ಪಿರ್ಯಾದಿದಾರರಾದ ಮೊಹಮ್ಮದ್ ಷರೀಫ್ ರವರ ಸಂಬಂಧಿ ಕಳವಾರು ನಿವಾಸಿ ಮಯ್ಯದ್ದಿ ಇಮ್ರಾನ್ ಮತ್ತು ತಾನು ಸೇರಿ ಈ ಕಳ್ಳತನ ಮಾಡಿರುವುದಾಗಿ ಒಪ್ಪಿಕೊಂಡಿರುತ್ತಾನೆ.
ಆರೋಪಿತರಿಂದ ಸುಮಾರು 27 ಲಕ್ಷ ರೂಪಾಯಿ ಮೌಲ್ಯದ 222 ಗ್ರಾಂ ತೂಕದ ಚಿನ್ನವನ್ನು, 20,000/- ರೂಪಾಯಿ ನಗದು ಹಣ, ಸುಮಾರು 50,000/- ರೂಪಾಯಿ ಮೌಲ್ಯದ ಸ್ಕೂಟರ್ ನ್ನು ವಶಕ್ಕೆ ಪಡೆದುಕೊಳ್ಳಲಾಗಿರುತ್ತದೆ. ಆರೋಪಿತರನ್ನು ಮಾನ್ಯ ನ್ಯಾಯಾಲಯದ ಮುಂದೆ ಹಾಜರುಪಡಿಸಿದ್ದು, ಮಾನ್ಯ ನ್ಯಾಯಾಲಯವು ನ್ಯಾಯಾಂಗ ಬಂಧನ ವಿಧಿಸಿರುತ್ತದೆ.




