ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ನಡೆಸಿದ ಚಿತ್ರಕಲಾ ಗ್ರೇಡ್ ಪರೀಕ್ಷೆಯಲ್ಲಿ 100 ಶೇಕಡಾ ಫಲಿತಾಂಶ
ವಿಟ್ಲ: ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ 17/12/2025 ರಿಂದ 19/12/2025ರ ವರೆಗೆ ನಡೆಸಿದ ಚಿತ್ರಕಲಾ ಗ್ರೇಡ್ ಪರೀಕ್ಷೆಯಲ್ಲಿ ಜನಪ್ರಿಯ ಸೆಂಟ್ರಲ್ ಶಾಲೆಯಿಂದ 10 ವಿಧ್ಯಾರ್ಥಿಗಳು ಹಾಜರಾಗಿದ್ದು, ಎಲ್ಲಾ ವಿಧ್ಯಾರ್ಥಿಗಳು ತೇರ್ಗಡೆಯಾಗುವ ಮೂಲಕ ಶೇ.100 ಫಲಿತಾಂಶ ಬಂದಿರುತ್ತದೆ.
ಹೈಯರ್ ಗ್ರೇಡ್ ವಿಭಾಗದಲ್ಲಿ 3 ವಿಧ್ಯಾರ್ಥಿಗಳು ಭಾಗವಹಿಸಿದ್ದು, 9 ನೇ ತರಗತಿ ವಿಧ್ಯಾರ್ಥಿಗಳಾದ ಮುಹಮ್ಮದ್ ರಾಫಿ ಮತ್ತು ಫಾತಿಮತ್ ಅಹಶಾನ ಉನ್ನತ ಶ್ರೇಣಿ ಹಾಗೂ ನೂರಾ ಸುಲೈಮಾನ್ (9ನೇ) ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾಗಿರುತ್ತಾರೆ.
ಲೋವರ್ ಗ್ರೇಡ್ ವಿಭಾಗದಲ್ಲಿ 7 ವಿಧ್ಯಾರ್ಥಿಗಳು ಭಾಗವಹಿಸಿದ್ದು, 8ನೇ ತರಗತಿ ವಿದ್ಯಾರ್ಥಿಗಳಾದ ಆಸ್ಯಮ್ಮತ್ ರಿಝ, ಫಾತಿಮತ್ ಹಫೀದ, ಮೊಹಮ್ಮದ್ ಅಯಾನ್ ಕಲಂದರ್ , ಮುಹಮ್ಮದ್ ಸಹದ್ , ರಿಂಶಾ ಫಾತಿಮ, ರಿಶಾ ಫಾತಿಮ ವಿಧ್ಯಾರ್ಥಿಗಳು ಉನ್ನತ ಶ್ರೇಣಿ ಹಾಗೂ ಮುಹಮ್ಮದ್ ಸದೀದ್ (8ನೇ) ವಿಧ್ಯಾರ್ಥಿ ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾಗಿರುತ್ತಾರೆ.
ವಿಧ್ಯಾರ್ಥಿಗಳಿಗೆ ಚಿತ್ರಕಲಾ ಶಿಕ್ಷಕ ಕೆ ದಿನೇಶ್ ವಿಶ್ವಕರ್ಮ ಇವರು ತರಬೇತಿ ನೀಡಿರುತ್ತಾರೆ. ಉತೀರ್ಣರಾಗಿರುವ ವಿದ್ಯಾರ್ಥಿಗಳನ್ನು ಶಾಲಾ ಮುಖ್ಯ ಶಿಕ್ಷಕರು ಲಿಬಿನ್ ಕ್ಸೇವಿಯರ್ ಹಾಗೂ ಅಡ್ಮಿನ್ ಆಫೀಸರ್ ಸಫ್ವಾನ್ ಪಿಲಿಕಲ್ ಅಭಿನಂದಿಸಿ ಶುಭಹಾರೈಸಿದರು.




