January 31, 2026

ಕರೋಪಾಡಿ: ಹೊಸ ಇತಿಹಾಸ ನಿರ್ಮಿಸಿದ ಬಾನೋಟ್ ಕುಟುಂಬ ಸಮ್ಮೀಳನ: ಒಂದೇ ಕುಟುಂಬದ ಒಂದೂವರೆ ಸಾವಿರ ಸದಸ್ಯರು ಒಂದೇ ಜಾಗದಲ್ಲಿ ಸೇರಿ ಸಮಾಗಮ

0
image_editor_output_image2127715030-1769596988152

ವಿಟ್ಲ :- ಬಂಟ್ವಾಳ ತಾಲೂಕಿನ ಕರೋಪಾಡಿ ಗ್ರಾಮದಲ್ಲಿ 2026 ಜನವರಿ 26 ಸೋಮವಾರದಂದು ಹೊಸ ಇತಿಹಾಸ ನಿರ್ಮಾಣವಾಗಿದೆ.

ಇತಿಹಾಸ ಪ್ರಸಿಧ್ಧವಾದ ಬಾನೋಟ್ ಕುಟುಂಬದ ಚರಿತ್ರೆಯನ್ನು ಸಾರುತ್ತಾ ಕಾರ್ಯಕ್ರಮದಲ್ಲಿ ಮರ್ಹೂಂ ಮೂಸಾ ಹಾಗೂ ಆಸಿಯಮ್ಮ ದಂಪತಿಗಳ ಹನ್ನೊಂದು ಮಕ್ಕಳ ಮಕ್ಕಳು ಹಾಗೂ ಮೊಮ್ಮಕ್ಕಳು ಅವರ ಮಕ್ಕಳು ಮೊಮ್ಮಕ್ಕಳು ಸೇರಿ ಒಂದುವರೆ ಸಾವಿರಕ್ಕಿಂತಲೂ ಹೆಚ್ಚು ಕುಟುಂಬದ ಸದಸ್ಯರು ಭಾಗಿಯಾಗಿದ್ದಾರೆ.

ಹಿರಿಯರ ಖಬರ್ ಝಿಯಾರತ್ ಮೂಲಕ ಬೆಳಿಗ್ಗೆ ಎಂಟೂವರೆ ಗಂಟೆಗೆ ಆರಂಭಗೊಂಡ ಕಾರ್ಯಕ್ರಮ ರಾತ್ರಿ ಒಂಭತ್ತು ಗಂಟೆಗೆ ಹನ್ನೊಂದು ಮಕ್ಕಳಲ್ಲಿ ನಮ್ಮೊಂದಿಗಿರುವ ಅಬೂಬಕ್ಕರ್ ಬಾನೋಟ್ ಹಾಗೂ ಪತ್ನಿ ಖದೀಜಾ , ಮರ್ಹೂಂ ಮೊಯ್ದಿನ್ ಕುಂಞಿ ಅವರ ಪತ್ನಿ ಬೀಫಾತಿಮ ಹಾಗೂ ಹನ್ನೊಂದು ಮಕ್ಕಳ ಎಪ್ಪತ್ತೆರಡು ಮಕ್ಕಳನ್ನು ಗೌರವಿಸುವ ಮೂಲಕ ಸಮಾಪ್ತಿಯಾಯಿತು.

ಬಾನೋಟ್ ಕುಟುಂಬದ ಅಧ್ಯಕ್ಷ ಮೂಸಾ ಸಮಡ್ಕರವರ ಅಧ್ಯಕ್ಷತೆಯಲ್ಲಿ ನಡೆದ ಪ್ರಸ್ತುತ ಕಾರ್ಯಕ್ರಮದಲ್ಲಿ, ಆಧ್ಯಾತ್ಮಿಕ ಸಂಗಮ,ಸ್ಮರಣೆ, ಮಕ್ಕಳಿಂದ ಹಿಡಿದು ಎಲ್ಲಾ ಹಿರಿಯರ ಹಾಡು, ಭಾಷಣ, ಸಂಗೀತ ಖುರ್ಚಿಯಿಂದ ಹಿಡಿದು ಹಗ್ಗಜಗ್ಗಾಟ ತನಕವಿರುವ ಹಲವಾರು ಸ್ಪರ್ಧೆಗಳು ನಡೆಯಿತು, ಸಾಧಕರಿಗೆ ಸನ್ಮಾನ, ಮಕ್ಕಳಿಗೆ ಬಹುಮಾನ, ಕುಟುಂಬದಲ್ಲಿ ಆಯ್ದ ಒಬ್ಬರಿಗೆ ವಾಶಿಂಗ್ ಮೆಶಿನ್, ವಾಹನವಿರುವವರಿಗೆ ಕುಟುಂಬದ ಹೊಸ ಲೋಗೋ ಸ್ಟಿಕ್ಕರ್ ಮುಂತಾದವುಗಳನ್ನು ನೀಡಲಾಯಿತು.

ಭಾಗವಯಿಸಿದ ಎಲ್ಲರಿಗೂ ಬೆಳಗ್ಗಿನ ಉಪಹಾರದಿಂದ ರಾತ್ರಿಯ ತನಕವಿರುವ ಎಲ್ಲಾ ಊಟದ ವ್ಯವಸ್ಥೆಯನ್ನು ಸಜ್ಜುಗೊಳಿಸಲಾಗಿತ್ತು ಎಂದು ಕುಂಟುಬದ ಪ್ರಧಾನ ಕಾರ್ಯದರ್ಶಿ ಸಫ್ವಾನ್ ಹನೀಫಿ ಬಾನೋಟ್ ತಿಳಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!