ವಿಟ್ಲ: ಜ.25 ಭಾನುವಾರ: ಒಕ್ಕೆತ್ತೂರಿನಲ್ಲಿ ಉಚಿತ ಆರೋಗ್ಯ ಶಿಬಿರ
ವಿಟ್ಲ; ಹಿದಾಯಾ ಫೌಂಡೇಶನ್ ಮಂಗಳೂರು ಹಾಗೂ ಬದ್ರಿಯಾ ಜುಮಾ ಮಸ್ಟಿದ್ ಒಕ್ಕೆತ್ತೂರು, ವಿಟ್ಲ ಇದರ ವತಿಯಿಂದ ಯೆನೆಪೋಯಾ ಮೆಡಿಕಲ್ ಕಾಲೇಜು ಆಸ್ಪತ್ರೆ ದೇರಳಕಟ್ಟೆ ಇವರ ಸಹಯೋಗದೊಂದಿಗೆ ಬೃಹತ್ ಉಚಿತ ಆರೋಗ್ಯ ತಪಾಸಣಾ ಶಿಬಿರವು ಜನವರಿ 25 ರ ಆದಿತ್ಯವಾರ ಬೆಳಿಗ್ಗೆ 9:30ರಿಂದ ಮಧ್ಯಾಹ್ನ 1:00ರವರೆಗೆ ಒಕ್ಕೆತ್ತೂರು ನೂರ್ ಮಹಲ್ ಸಮುದಾಯ ಭವನದಲ್ಲಿ ನಡೆಯಲಿದೆ.
ಶಿಬಿರದಲ್ಲಿ ಲಭ್ಯವಿರುವ ಉಚಿತ ಸೇವೆಗಳು:ಸಾಮಾನ್ಯ ವೈದ್ಯಕೀಯ ಪರೀಕ್ಷೆ , ಕಿವಿ, ಮೂಗು ಮತ್ತು ಗಂಟಲು ಪರೀಕ್ಷೆ ,ಎಲುಬು ತಪಾಸಣೆ ,ಚರ್ಮ ತಪಾಸಣೆ ಮಕ್ಕಳ ತಜ್ಞರು ,ಕಣ್ಣು ಪರೀಕ್ಷೆ
ಮಹಿಳೆಯರಿಗಾಗಿ ಮೊಬೈಲ್ ಕ್ಲಿನಿಕ್ ಬಸ್ (ಆಧುನಿಕ ಸೌಲಭ್ಯದ ಸುಸಜ್ಜಿತ ಬಸ್ಸಿನಲ್ಲಿ ಮೆಮೊಗ್ರಫಿ ಸಹಿತ ತಪಾಸಣಾ ವ್ಯವಸ್ಥೆ) ,ಬಿಪಿ, ಡಯಾಬಿಟಿಸ್ ಮತ್ತು ಉಚಿತ ಔಷಧಿ ವಿತರಣೆ ನಡೆಯಲಿದೆ .
ಆರೋಗ್ಯ ಜಾಗೃತಿ ವಿಶೇಷ ಕಾರ್ಯಕ್ರಮ ಡಾ| ಫಾತಿಮಾ ಸುಹಾನಾ ಇವರಿಂದ ನಡೆಸಲಾಗುವುದು ತರಗತಿ ಕೇವಲ ಮಹಿಳೆಯರಿಗೆ ಮಾತ್ರವಾಗಿರುತ್ತದೆ ಎಂದು ಸಂಘಟಕರು ತಿಳಿಸಿದ್ದಾರೆ.




