ಪುತ್ತೂರು: ಮರದಿಂದ ಬಿದ್ದು ಬೆಟ್ಟಂಪಾಡಿಯ ನಿವೃತ್ತ ಶಿಕ್ಷಕ ಸಾವು
ಪುತ್ತೂರು: ತೆಂಗಿನ ಮರಕ್ಕೆ ಹಬ್ಬಿದ್ದ ಕಾಳುಮೆಣಸಿನ ಗಿಡದಿಂದ ಕಾಳು ಮೆಣಸು ಕೀಳುವ ವೇಳೆ ನಿವೃತ್ತ ಶಿಕ್ಷಕರೊಬ್ಬರು ಬಿದ್ದು ಸಾವನಪ್ಪಿದ ಘಟನೆ ಬೆಟ್ಟಂಪಾಡಿ ಎಂಬಲ್ಲಿ ನಡೆದಿದೆ.
ಮೃತರನ್ನು ಬೆಟ್ಟಂಪಾಡಿ ಗ್ರಾಮದ ಗುಮ್ಮಟೆಗದ್ದೆ ನಿವಾಸಿ ನಾರಾಯಣ ನಾಯ್ಕ ಪೈಂತಿಮುಗೇರು ಎಂದು ಗುರುತಿಸಲಾಗಿದೆ. ಘಟನೆ ಜನವರಿ 19 ರಂದು ನಡೆದಿದೆ.
ಬೆಳಗ್ಗೆ ತನ್ನ ಮನೆ ಮುಂಭಾಗದಲ್ಲಿದ್ದ ತೆಂಗಿನ ಮರದಲ್ಲಿ ಬೆಳೆದಿದ್ದ ಕಾಳು ಮೆಣಸನ್ನು ಅಲ್ಯೂಮಿನಿಯಂ ಏಣಿ ಏರಿ ಕೊಯ್ಯುತ್ತಿದ್ದಾಗ ಏಣಿ ಸಹಿತ ಅವರು ಮರದಿಂದ ಜಾರಿ ಬಿದ್ದಿದ್ದಾರೆ. ಘಟನೆಯಿಂದ ನಾರಾಯಣ ನಾಯ್ಕರವರಿಗೆ ಗಂಭೀರ ಗಾಯಗಳಾಗಿದ್ದು ಅವರನ್ನು ಕೂಡಲೇ ಪುತ್ತೂರು ಆಸ್ಪತ್ರೆಗೆ ಕರೆತರಲಾಗಿತ್ತು. ಆದರೆ ಅವರು ದಾರಿ ಮಧ್ಯೆ ಮೃತಪಟ್ಟಿದ್ದಾರೆ. ಮೃತರು ಪತ್ನಿ, ಇಬ್ಬರು ಪುತ್ರ ರನ್ನು ಅಗಲಿದ್ದಾರೆ.




