ವಿಟ್ಲ: ಫೆ.11ರಂದು ಒಕ್ಕೆತ್ತೂರಿನಲ್ಲಿ ಸಿರಾಜುದ್ದೀನ್ ಖಾಸಿಮಿ ಅವರಿಂದ ಮುಖ್ಯ ಪ್ರಭಾಷಣ: ಮಾಡನ್ನೂರಿನಲ್ಲಿ ಪೋಸ್ಟರ್ ಬಿಡುಗಡೆಗೊಳಿಸಿದ ಸಿರಾಜುದ್ದೀನ್ ಖಾಸಮಿ ಉಸ್ತಾದ್
ವಿಟ್ಲ: ಮೊಟ್ಟ ಮೊದಲ ಬಾರಿಗೆ ಫೆ. 11ರಂದು ವಿಟ್ಲದ ಒಕ್ಕೆತ್ತೂರು ಮಣ್ಣಿಗೆ ಆಗಮಿಸಲಿರುವ ಅಂತರಾಷ್ಟ್ರೀಯ ವಾಗ್ಮಿ ಹಾಫಿಲ್ ಸಿರಾಜುದ್ದೀನ್ ಖಾಸಿಮಿ ಉಸ್ತಾದರ ಕಾರ್ಯಕ್ರಮದ ಪೋಸ್ಟರ್ ಅನ್ನು ಮಾಡನ್ನೂರ್ ನಲ್ಲಿ ಸಿರಾಜುದ್ದೀನ್ ಖಾಸಿಮಿ ಉಸ್ತಾದ್ ಬಿಡುಗಡೆಗೊಳಿಸಿದರು.
ಫೆ. 11ರಂದು ಒಕ್ಕೆತ್ತೂರಿನಲ್ಲಿ ಸಿರಾಜುದ್ದೀನ್ ಉಸ್ತಾದರ ಪ್ರಭಾಷಣ ನಡೆಯಲಿದ್ದು, ಇದರ ಪ್ರಚಾರ ಪೋಸ್ಟರ್ ಅನ್ನು ಮಾಡನ್ನೂರ್ ನಲ್ಲಿ ನಡೆದ ಮಜ್ಲಿಸುನ್ನೂರು ವಾರ್ಷಿಕ ಕಾರ್ಯಕ್ಕೆ ಮುಖ್ಯ ಪ್ರಭಾಷಣಕ್ಕೆ ಅಸಗಮಿಸಿದ್ದ ಉಸ್ತಾದರು ಬಿಡುಗಡೆಗೊಳಿಸಿದರು.

ಈ ಕಾರ್ಯಕ್ರಮದಲ್ಲಿ ಜಮಾಅತ್ ಅಧ್ಯಕ್ಷರಾದ ವಿ ಎಂ ಅಶ್ರಫ್ ಹಾಜಿ, ಉಪಾಧ್ಯಕ್ಷ ಅಬ್ದುಲ್ ಖಾದರ್ ಸುಪರ್, ಕಾರ್ಯದರ್ಶಿ ಜಮಾಲ್, ರಶೀದ್ ಸಿ.ಎಚ್, ಸೈಯಪ್ ಒಕ್ಕೆತ್ತೂರು ಉಪಸ್ಥಿತರಿದ್ದರು.




