January 31, 2026

ವಿಟ್ಲ ಸೀಮೆಯ ಮಹತೋಭಾರ ಶ್ರೀ ಪಂಚಲಿಂಗೇಶ್ವರ ಜಾತ್ರೋತ್ಸವಕ್ಕೆ ಚಾಲನೆ

0
image_editor_output_image1393051294-1768382758523

ವಿಟ್ಲ: ವಿಟ್ಲ ಸೀಮೆಯ ಮಹತೋಭಾರ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದ ಕಾಲಾವಧಿ ಜಾತ್ರೋತ್ಸವದ ಧ್ವಜಾರೋಹಣ ನಡೆಯಿತು.

ಆಲಂಪಾಡಿ ಪದ್ಮನಾಭ ತಂತ್ರಿಯವರ ನೇತೃತ್ವದಲ್ಲಿ ವಿವಿಧ ವೈದಿಕ ವಿಧಿ ವಿಧಾನಗಳು ನಡೆದ ಬಳಿಕ ಧ್ವಜಾರೋಹಣ ನೆರವೇರಿತು. ಬಳಿಕ ಊರಪರವೂರ ಭಕ್ತರು ಸಮರ್ಪಿಸಿದ ಫಲಪುಷ್ಪಾದಿಗಳನ್ನು ಧ್ವಜಸ್ತಂಭಕ್ಕೆ ಸಿಂಗರಿಸಲಾಯಿತು. ಮಧ್ಯಾಹ್ನ ಮಹಾಪೂಜೆ, ಅನ್ನಸಂತರ್ಪಣೆ ನಡೆಯಿತು.

ಈ ಸಂದರ್ಭದಲ್ಲಿ ವಿಟ್ಲ ಅರಮನೆಯ ಅರಸರಾದ ಬಂಗಾರು ಅರಸರು, ಸದಾಶಿವ ಕೆ., ಅರ್ಚಕ ವರ್ಗ, ದೇವರ ಸೇವಾ ಕಾರ್ಯಕರ್ತರು, ಜೀರ್ಣೋದ್ಧಾರ ಸಮಿತಿ ಕಾರ್ಯಾಧ್ಯಕ್ಷ ಹೆಚ್. ಜಗನ್ನಾಥ ಸಾಲಿಯಾನ್, ಸೀಮೆಗುರಿಕಾರರು ಊರ ಪರವೂರ ಸಹಸ್ರಾರು ಸಂಖ್ಯೆಯ ಭಕ್ತಾದಿಗಳು ಪಾಲ್ಗೊಂಡರು.

Leave a Reply

Your email address will not be published. Required fields are marked *

error: Content is protected !!