ಕಾರವಾರ: ಜೆಡಿಎಸ್ ಮುಖಂಡೆ ಪುತ್ರನ ಕಿರುಕುಳ: ಯುವತಿ ಆತ್ಮಹತ್ಯೆ
ಕಾರವಾರ: ಪ್ರೀತಿ ಹೆಸರಲ್ಲಿ ಜೆಡಿಎಸ್ ಮುಖಂಡೆ ಪುತ್ರ ನೀಡಿದ ಕಿರುಕುಳ ಸಹಿಸಲಾಗದೇ ಯುವತಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಉತ್ತರ ಕನ್ನಡ ಜಿಲ್ಲೆಯ ಕಾರವಾರದಲ್ಲಿ ನಡೆದಿದೆ.
ಕದ್ರಾ ಕೆಪಿಸಿ ಕಾಲೋನಿಯ ನಿವಾಸಿ ರಿಶೇಲ್ ಡಿಸೋಜಾ(20) ಆತ್ಮಹತ್ಯೆ ಮಾಡಿಕೊಂಡ ಯುವತಿ ಎಂದು ತಿಳಿದುಬಂದಿದ್ದು, ಜೆಡಿಎಸ್ ಮುಖಂಡೆ ಪುತ್ರ ಚಿರಾಗ್ ಪ್ರೀತಿ ಹೆಸರಲ್ಲಿ ಕಿರುಕುಳ ನೀಡಿದ್ದ ಎನ್ನಲಾಗಿದೆ.




