ಜನಪ್ರಿಯ ಫೌಂಡೇಶನ್ ಚೇಯರ್ಮ್ಯಾನ್ ಡಾ. ಅಬ್ದುಲ್ ಬಶೀರ್ ವಿ.ಕೆ ಅವರ ಪುತ್ರನ ಮದುವೆ ಕಾರ್ಯಕ್ರಮಕ್ಕೆ ಆಗಮಿಸಿದ ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್
ವಿಟ್ಲ: ಜನಪ್ರಿಯ ಫೌಂಡೇಶನ್ ಚೇಯರ್ಮ್ಯಾನ್ ಡಾ. ಅಬ್ದುಲ್ ಬಶೀರ್ ವಿ.ಕೆ ಅವರ ಪುತ್ರನ ಮದುವೆಗೆ ಉಪ ಮುಖ್ಯಂತ್ರಿ ಡಿಕೆ ಶಿವಕುಮಾರ್ ಅವರು ಭಾಗವಹಿಸಿ ಶುಭ ಹಾರೈಸಿದರು.

ಜನಪ್ರಿಯ ಫೌಂಡೇಶನ್ ಚೇಯರ್ಮ್ಯಾನ್ ಡಾ. ಅಬ್ದುಲ್ ಬಶೀರ್ ಅವರ ಪುತ್ರ ಡಾ. ಶಾರೂಖ್ ಅಬ್ದುಲ್ಲಾ ಮತ್ತು ಡಾ. ಜಶ್ನಿ ಅವರ ವಿವಾಹ ಕಾರ್ಯಕ್ರಮ ಮುಡಿಪು ಸಮೀಪದ ಹರೇಕಳ ರೆಸಾರ್ಟ್ ನಲ್ಲಿ ಆಯೋಜಿಸಲಾಗಿತ್ತು. ಡಾ. ಅಬ್ದುಲ್ ಬಶೀರ್ ಅವರು ಉಪ ಮುಖ್ಯಮಂತ್ರಿ ಡಿಕೆಶಿ ಅವರನ್ನು ಭೇಟಿ ಮಾಡಿ ಮದುವೆ ಆಮಂತ್ರಣ ಪತ್ರಿಕೆ ನೀಡಿದ್ದರು. ಅವರ ಆಹ್ವಾನಕ್ಕೆ ಡಿಕೆಶಿ ಅವರು ಆಗಮಿಸಿ ನೂತನ ವಧು ವರರಿಗೆ ಶುಭ ಹಾರೈಸಿದರು. ಡಾ. ಅಬ್ದುಲ್ ಬಶೀರ್ ಅವರು ವೈದ್ಯಾಕೀಯ ಮತ್ತು ಶೈಕ್ಷಣಿಕ ಸೇವೆಯ ಬಗ್ಗೆ ಡಿಕೆಶಿ ಅವರು ಮೆಚ್ಚುಗೆ ವ್ಯಕ್ತಪಡಿಸಿದರು.

ಈ ಸಂದರ್ಭ ಡಾ. ಇಫ್ತಿಕಾರ್, ಇನಾಯತ್ ಅಲಿ, ಜನಪ್ರಿಯ ಫೌಂಡೇಶನ್ ಅಧ್ಯಕ್ಷೆ ನಸ್ರೀನಾ ಬಶೀರ್, ಮಂಗಳೂರು ಜನಪ್ರಿಯ ಆಸ್ಪತ್ರೆಯ CEO ಡಾ. ಕಿರಾಸ್ ಪರ್ತಿಪ್ಪಾಡಿ, ಜನಪ್ರಿಯ ಸೆಂಟ್ರಲ್ ಸ್ಕೂಲ್ ನ ನಿರ್ದೇಶಕ ನೌಶೀನ್ ಬದ್ರಿಯಾ, ಡಾ. ಅಬ್ದುಲ್ ಬಶೀರ್ ಅವರ ಪುತ್ರರಾದ ಶಫಖ್, ಶಾಮೀಕ್ ಮೊದಲಾದವರು ಉಪಸ್ಥಿತರಿದ್ದರು.




