ಅಲ್-ಮುರಾಫಖಃ 2K26 ಸಾಹಿತ್ಯ ಹಬ್ಬಕ್ಕೆ ಇಂದು ಅದ್ದೂರಿ ಚಾಲನೆ
ಉಕ್ಕುಡ:
ಬದ್ರಿಯಾ ಜುಮಾ ಮಸೀದಿ ಉಕ್ಕುಡ ಇದರ ಆಶ್ರಯದಲ್ಲಿ ನಡೆಯುತ್ತಿರುವ ಮುಹ್ಯಿಸ್ಸುನ್ನ ದರ್ಸ್ ಇದರ ಮುತಅಲ್ಲಿಮರ ಕಲಾ–ಸಾಹಿತ್ಯ ಕಲರವ ಅಲ್-ಮುರಾಫಖಃ 2K26 ಹಾಗೂ ಸದರಿ ಮಸೀದಿ ಮುದರ್ರಿಸ್ ಹಾಫಿಳ್ ಅಹ್ಮದ್ ಶರೀಫ್ ಕಾಮಿಲ್ ಸಖಾಫಿ ಅಲ್-ಹಿಕಮಿ ಅಲ್-ಅರ್ಷದಿ ಮಳಲಿ ಉಸ್ತಾದರ ದರ್ಸಿನ 15ನೇ ವಾರ್ಷಿಕೋತ್ಸವದ ಉದ್ಘಾಟನಾ ಸಮಾರಂಭಕ್ಕೆ ಇಂದು ಜುಮಾ ನಮಾಝಿನ ಬಳಿಕ ಅದ್ದೂರಿಯಾಗಿ ಚಾಲನೆ ದೊರಕಲಿರುವುದು.
ಮೂರು ದಿನಗಳ ಕಾಲ ನಡೆಯಲಿರುವ ಈ ಸಾಹಿತ್ಯ ಹಬ್ಬದಲ್ಲಿ, ಮುತಅಲ್ಲಿಮರ ಕಲಾ, ಸಾಹಿತ್ಯ ಪ್ರತಿಭೆಗಳನ್ನು ಅನಾವರಣಗೊಳಿಸುವ ವಿವಿಧ ಸ್ಪರ್ಧೆಗಳು, ಅಧ್ಯಯನಾತ್ಮಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ.
ಈ ಮೂರು ದಿನಗಳ ಕಾರ್ಯಕ್ರಮದ ಸಮಾರೋಪ ಸಮಾರಂಭವು ಆದಿತ್ಯವಾರ ನಡೆಯಲಿದ್ದು, ಮುಖ್ಯ ಅತಿಥಿಗಳಾಗಿ ಖುದ್ವತುಸ್ಸಾದಾತ್ ಸಯ್ಯಿದ್ ಕೆ.ಎಸ್. ಆಟಕ್ಕೋಯ ತಂಙಳ್ ಕುಂಬೋಳ್, ಜಾಮೀಯಾ ಹಿಕಮಿಯ್ಯಾ ಮುದರ್ರಿಸ್ ಅಲ್ ಉಸ್ತಾದ್ ಮುಹಮ್ಮದ್ ಸಖಾಫಿ ಇಲ್ಲಿಪುಲಾಕ್ಕಲ್, ವಿಟ್ಲದ ಜನಪ್ರಿಯ ವೈದ್ಯರಾದ ಡಾ. ವಿ.ಕೆ. ಹೆಗ್ಡೆ MBBS, MCCP , ಡಾ| ಪ್ರಶಾಂತ್ ಬಿ.ಎನ್. MBBS, DCH , ಬದ್ರಿಯಾ ಜುಮಾ ಮಸೀದಿ, ಉಕ್ಕುಡ ಇದರ ಅಧ್ಯಕ್ಷರಾದ ಬದ್ರುಲ್ ಮುನೀರ್ ದರ್ಬೆ, ಕಾರ್ಯದರ್ಶಿ ಅಶ್ರಫ್ ಅಲಿ ನೆಕ್ಕರೆಕಾಡು, ಕೋಶಾಧಿಕಾರಿ ಮುಹಮ್ಮದ್ ಟಾಪ್ಕೋ ಸೇರಿದಂತೆ ಇನ್ನಿತರ ಉಲಮಾ, ಉಮರಾ, ಸಾಮಾಜಿಕ ಹಾಗೂ ರಾಜಕೀಯ ನಾಯಕರು ಈ ಸಮಾರಂಭದಲ್ಲಿ ಭಾಗವಹಿಸಲಿದ್ದಾರೆ.
ಅಲ್-ಮುರಾಫಖಃ 2K26 ಸಾಹಿತ್ಯ ಹಬ್ಬವು ಧಾರ್ಮಿಕ ಜಾಗೃತಿ, ಸಾಹಿತ್ಯಿಕ ಬೆಳವಣಿಗೆ ಹಾಗೂ ಸಾಂಸ್ಕೃತಿಕ ಸೌಹಾರ್ದತೆ ಬೆಳೆಸುವ ಉದ್ದೇಶ ಹೊಂದಿದೆ.




