ಅರಳ ಗ್ರಾಮ ಪಂಚಾಯತ್ ವಿಶೇಷ ಚೇತನರ ಸಮನ್ವಯ ಗ್ರಾಮ ಸಭೆ
ದಿನಾಂಕ 29/12/2025 ರ ಸೋಮವಾರ ಅರಳ ಗ್ರಾಮ ಪಂಚಾಯತಿನಲ್ಲಿ2025-26 ನೇ ಸಾಲಿನ ವಿಶೇಷ ಚೇತನರ ಸಮನ್ವಯ ಗ್ರಾಮ ಸಭೆಯು ಅರಳ ಗ್ರಾಮ ಪಂಚಾಯತ್ ಸಭಾಂಗಣದಲ್ಲಿ ನಡೆಯಿತು.
ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶ್ರೀಮತಿ ದೇವಕಿ ಇವರ ಅಧ್ಯಕ್ಷತೆಯಲ್ಲಿ ನಡೆಯಿತು. ಪಂಚಾಯತ್ ಅಭಿವೃದ್ಧಿ ಅಧಿಕಾರಿ ಧರ್ಮರಾಜ.ಪಿ.ಉಪಾಧ್ಯಕ್ಷರು ಸದಸ್ಯರು ಪಂಚಾಯಿತಿ ಸಿಬ್ಬಂದಿಗಳು ಗ್ರಾಮೀಣ ಪುನರ್ ವಸತಿ ಕಾರ್ಯಕರ್ತ ಸಾಹುಲ್ ಹಮೀದ್ ಹಾಗೂ ವಿಶೇಷ ಚೇತನರು ಅವರ ಪೋಷಕರು ಭಾಗವಹಿಸಿದರು. ಎಲ್ಲರನ್ನು ಪಂಚಾಯತ್ ಅಭಿವೃದ್ಧಿ ಅಧಿಕಾರಿಯವರು ಸ್ವಾಗತಿಸಿದರು. ಹಾಗೂ ವಿಶೇಷ ಚೇತನರ ಇಲಾಖೆಯಿಂದ ಸಿಗುವ ಸೌಲಭ್ಯಗಳ ಬಗ್ಗೆ ಮತ್ತು ಇತರ ಇಲಾಖೆಯಿಂದ ಸಿಗುವ ಸೌಲಭ್ಯದ ಬಗ್ಗೆ ವಿಸ್ತಾರವಾಗಿ ಮಾಹಿತಿ ನೀಡಿ. ವಿಶೇಷ ಚೇತನರ ಕುಂದು ಕೊರತೆಗಳ ಪರಿಹಾರ ಪಡೆಯುವುದರ ಬಗ್ಗೆ ತಿಳಿಸಿದರು.
ಈ ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯತ್ ವಿಕಲಚೇತನರ 5% ಅನುದಾನದಲ್ಲಿ 5 ಜನ ಅರ್ಹ ಫಲಾನುಭವಿಗಳಿಗೆ ವೈದ್ಯಕೀಯ ವೆಚ್ಚಕ್ಕಾಗಿ ಸಹಾಯಧನ,ಒಬ್ಬರಿಗೆ ಮನೆ ರಿಪೇರಿಗೆ ಸಹಾಯಧನ , ಹಾಗೂ ಒಬ್ಬರಿಗೆ ವೀಲ್‌ಚೇರ್ ನೀಡಲಾಯಿತು. ಒಟ್ಟು ಈ ಸಭೆಯಲ್ಲಿ 33 ಒಂದು ಜನ ಭಾಗವಹಿಸಿದ್ದರು. ಕೊನೆಯದಾಗಿ ವಂದನಾರ್ಪಣೆಯನ್ನು ಸಲ್ಲಿಸಿದರು.




