ಮಕ್ಕಳ ಜೊತೆ ಸಂಪ್ಗೆ ಬಿದ್ದು ತಾಯಿ ಆತ್ಮಹತ್ಯೆ
ತುಮಕೂರು: ಮಕ್ಕಳ ಜೊತೆ ಸಂಪಿಗೆ ಬಿದ್ದು ತಾಯಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತುಮಕೂರು ತಾಲ್ಲೂಕಿನ ಹಿರೇಹಳ್ಳಿಯ ಸಿಂಗನಹಳ್ಳಿ ಕಾಲೊನಿಯಲ್ಲಿ ನಡೆದಿದೆ.
ವಿಜಯಲಕ್ಷ್ಮಿ ತನ್ನ ಮಕ್ಕಳ ಜೊತೆ ಸಂಪಿಗೆ ಬಿದ್ದು ಆತ್ಮಹತ್ಯೆ ಶರಣಾರದವರು. ಶಿವಗಂಗೆ ಮೂಲದ ಸಂಪತ್ ಕುಮಾರ್‌ಗೆ ನೆಲಮಂಗಲ ಮೂಲದ ವಿಜಯಲಕ್ಷ್ಮಿ ಕೊಟ್ಟು ಮದುವೆ ಮಾಡಲಾಗಿತ್ತು. ಮದುವೆಯಾಗಿ ಕೇವಲ 6 ವರ್ಷ ಅಷ್ಟೇ ಆಗಿತ್ತು. ತುಮಕೂರಿನ ಹಿರೇಹಳ್ಳಿಯ ಸಿಂಗನಹಳ್ಳಿ ಕಾಲೋನಿಯಲ್ಲಿ ಬಾಡಿಗೆ ಮನೆಯಲ್ಲಿ ವಾಸ ಇದ್ದರು. ಗಂಡ ಸಂಪತ್ ಕುಮಾರ್, ಇಬ್ಬರು ಮಕ್ಕಳು ಹಾಗೂ ಅತ್ತೆ ಮಾವರೊಂದಿಗೆ ಅನ್ಯೋನ್ಯವಾಗಿ ಸಂಸಾರ ಸಾಗಿತ್ತು.




