ಕಾಸರಗೋಡು: ಶಾಲೆಯಲ್ಲಿ ಅಡುಗೆ ಮಾಡುವಾಗ ಬೆಂಕಿ ತಗುಲಿ ಮಹಿಳೆ ಸಾವು
ಕಾಸರಗೋಡು: ಶಾಲೆಯಲ್ಲಿ ಮಧ್ಯಾಹ್ನದ ಊಟದ ಅಡುಗೆ ಮಾಡುವ ವೇಳೆ ಸ್ಟವ್ ನಿಂದ ಬೆಂಕಿ ತಗುಲಿ ಗಂಭೀರ ಗಾಯಗೊಂಡು ಅಡುಗೆಯಾಳು ಸಾವನ್ನಪ್ಪಿದ್ದಾರೆ.
ಕಾಸರಗೋಡು, ಬಂಗ್ರ ಮಂಜೇಶ್ವರ ಸರಕಾರಿ ಹೈಸ್ಕೂಲಿನ ಅಡುಗೆ ನೌಕರೆ ಉದ್ಯಾವರ ಮಾಡ ನಿವಾಸಿ ಜಯ(56) ಸಾವನ್ನಪ್ಪಿದ ದುರ್ದೈವಿ. ಶಾಲಾ ಅಡುಗೆ ಕೋಣೆಯಲ್ಲಿ ಅಡುಗೆ ಮಾಡುತ್ತಿದ್ದಾಗ ಬೆಂಕಿ ತಗುಲಿದ್ದು ಇವರ ಬೊಬ್ಬೆ ಕೇಳಿ ಅಧ್ಯಾಪಕರು ಧಾವಿಸಿ ಬಂದು ಅವರನ್ನು ಆಸ್ಪತ್ರೆಗೆ ಸಾಗಿಸಿದ್ದರು. ಕಳೆದ 20 ವರ್ಷಗಳಿಂದ ಶಾಲೆಯಲ್ಲಿ ಅಡುಗೆ ಮಾಡುತ್ತಿದ್ದ ಇವರ ದುರ್ಮರಣ ಶಾಲೆ ಮತ್ತು ಊರವರನ್ನು ಗಾಢ ದುಖಃಕ್ಕೆ ತಳ್ಳಿದೆ.




