ಚಾಕುವಿನಿಂದ ಇರಿದು ಯುವತಿಯ ಹತ್ಯೆ: ಪ್ರಿಯಕರ ಪರಾರಿ
ನ್ಯೂಯಾರ್ಕ್: ಭಾರತೀಯ ಮೂಲದ ಮಾಜಿ ಪ್ರೇಯಸಿಯನ್ನು ಕೊಲೆ ಮಾಡಿದ ಆರೋಪಿ ಭಾರತಕ್ಕೆ ಪರಾರಿಯಾದ ಘಟನೆ ನಡೆದಿದೆ. 26 ವರ್ಷದ ಅರ್ಜುನ್ ಶರ್ಮಾ ಎಂಬಾತ ತನ್ನ ಪ್ರಿಯತಮೆ ನಿಖಿತಾಗೋಡಿಶಾಲಾ (27)ಳನ್ನು ಚಾಕುವಿನಿಂದ ಇರಿದು ಹತ್ಯೆ ಮಾಡಿ, ಭಾರತಕ್ಕೆ ಪರಾರಿಯಾಗಿದ್ದಾನೆ.
ಇತ್ತೀಚೆಗೆ ಅಮೆರಿಕದ ಹೌವರ್ಡ್‌ನ ಕೌಂಟಿಯಲ್ಲಿನ ಅಪಾರ್ಟ್‌ಮೆಂಟ್‌ನಲ್ಲಿ ಭಾರತೀಯ ಮೂಲದ ಯುವತಿ ನಿಖಿತಾಗೋಡಿಶಾಲಾರ ಮೃತದೇಹ ಪತ್ತೆಯಾಗಿತ್ತು, ಈ ಪ್ರಕರಣ ಜಾಡು ಹಿಡಿದ ಪೊಲೀಸರಿಗೆ ನಿಖಿತಾಗೋಡಿಶಾಲಾ ಎಲಿಕಾಟ್ ಸಿಟಿಯ ನಿವಾಸಿ ಎನ್ನುವುದು ತನಿಖೆ ವೇಳೆ ಬಯಲಿಗೆ ಬಂದಿದೆ. ನಿಕಿತಾರ ಮಾಜಿ ಪ್ರೇಮಿ ಅರ್ಜುನ್ ವಿರುದ್ಧ ಸದ್ಯ ಪೊಲೀಸರು ಬಂಧನದ ವಾರೆಂಟ್ ಹೊರಡಿಸಿದ್ದಾರೆ.




