4 ವರ್ಷ ಪೂರೈಸಿದ ತಾಜುಲ್ ಉಲಮಾ ಆಂಬುಲೆನ್ಸ್ ವಿಟ್ಲ
ವಿಟ್ಲ: ಸುನ್ನೀ ಕೋ ಓರ್ಡಿನೇಷನ್ ಸಮಿತಿ ವತಿಯಿಂದ ಸಾರ್ವಜನಿಕ ಸೇವೆಯಲ್ಲಿ ನಿರತವಾಗಿರುವ ಆಂಬುಲೆನ್ಸ್ ಸೇವೆ 4 ವರ್ಷ ಪೂರೈಸಿತು. ತಾಜುಲ್ ಉಲಮಾ ಸ್ಮರಣಾರ್ಥ ಸಾರ್ವಜನಿಕ ಸೇವೆ ಸಲ್ಲಿಸುತ್ತಾ ತಾಜುಲ್ ಉಲಮಾ ನಿರ್ವಹಣಾ ಸಮಿತಿ ಉತ್ತಮ ಸಮಾಜಮುಖಿ ಕಾರ್ಯಕ್ರಮಗಳನ್ನು ಮಾಡುವುದರ ಮೂಲಕ ನಾಲ್ಕು ವರ್ಷ ತೃಪ್ತಿದಾಯಕ ಆಂಬುಲೆನ್ಸ್ ಸೇವೆ ಸಲ್ಲಿಸಿದೆ.
ಅದೆಷ್ಟೋ ಬಡವರಿಗೆ ಆಸರೆಯಾಗಿರುವ ಆಂಬುಲೆನ್ಸ್ ಇದೀಗ 4 ನೇ ವಾರ್ಷಿಕ ಪ್ರಯುಕ್ತ 5 ಬಡ ಕುಟುಂಬಗಳಿಗೆ ಕಿಟ್ ಮತ್ತು ಧನಸಹಾಯ ನೀಡಲಾಯಿತು. ಅದರ ಜೊತೆಗೆ ಸಾಂತ್ವನದ ಸ್ಟಿಕರ್ ಕೂಡ ಬಿಡುಗಡೆ ಮಾಡಲಾಯಿತು.
ಆಂಬುಲೆನ್ಸ್ ಕೋಡಿನೇಟರ್ ಅಬ್ದುಲ್ ಹಮೀದ್ ಹಾಜಿ ಕೊಡಂಗಾಯಿ ಚೀಫ್ ಕೋಡಿನೇಟರ್ ಮುಸ್ತಫ ಕೋಡಪದವು, ಕೋಡಿನೇಟರ್ ಅಬ್ದುಲ್ ಹಕೀಮ್ ಕಂಬಳಬೆಟ್ಟು, ಕಾರ್ಯದರ್ಶಿ ಜಾಝ್ ಅಳಿಕೆ, ಎಸ್ ವೈ ಎಸ್ ವಿಟ್ಲ ಝೋನ್ ಅಧ್ಯಕ್ಷರಾದ ರಹೀಮ್ ಸಖಾಫಿ, ರಫೀಕ್ ಒಕ್ಕೆತ್ತೂರು, ಅಝೀಝ್
ಕುಲಾಲ್ ಮತ್ತಿತರು ಉಪಸ್ಥಿತರಿದ್ದರು.




