January 31, 2026

ಮಂಗಳೂರು: ಅಕ್ರಮ ಗೋಮಾಂಸ ಸಾಗಾಟ ಪತ್ತೆ ಪ್ರಕರಣ: Muslim leader ಹೆಸರಿನ ಇನ್ಸ್ಟಾಗ್ರಾಂ ಪೇಜಲ್ಲಿ ಕೋಮು ಪ್ರಚೋದ ಬರಹ -ಪ್ರಕರಣ ದಾಖಲಿಸಿದ ಪೊಲೀಸರು

0
image_editor_output_image-2099547691-1767513922906.jpg

ಬಜ್ಪೆ: ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಇತ್ತೀಚೆಗೆ ಅಬ್ದುಲ್ ಸತ್ತಾರ್ ಎಂಬಾತನು ತನ್ನ ಮಗಳನ್ನು ಸ್ಕೂಟರ್ ನಲ್ಲಿ ಕೂರಿಸಿಕೊಂಡು ಅಕ್ರಮವಾಗಿ ದನದ ಮಾಂಸ ಸಾಗಾಟ ಮಾಡುತ್ತಿದ್ದ ಬಗ್ಗೆ ಮತ್ತು ಅಬ್ದುಲ್ ಸತ್ತಾರ್ ರವರನ್ನು ಸುಮೀತ್ ಮತ್ತು ಎಮ್ ರಜತ್ ನಾಯಕ್ ಎಂಬವರು ತಡೆದು ನಿಲ್ಲಿಸಿ ಹಲ್ಲೆ ಮಾಡಿದ ಬಗ್ಗೆ ಬಜ್ಪೆ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಪ್ರತ್ಯೇಕ ಪ್ರಕರಣಗಳು ತನಿಖೆಯಲ್ಲಿರುತ್ತವೆ.

ಪ್ರಕರಣಕ್ಕೆ ಸಂಬಂಧಿಸಿದಂತೆ muslim leader ಹೆಸರಿನ ಇನ್ಸ್ಟಾಗ್ರಾಂ ಸಾಮಾಜಿಕ ಜಾಲ ತಾಣ ಪೇಜಲ್ಲಿ ಇಬ್ಬರು ಯುವಕರ ಫೊಟೋ ಹಾಕಿ “ಮಿತಿ ಮೀರುತ್ತಿರುವ ಸಂಘಿಗಳ ಅಟ್ಟಹಾಸ..ಇದಕ್ಕೆ ಕಡಿವಾಣ ಇಲ್ಲದಾಯಿತೇ.? ಸಂಘ ಪರಿವಾರದ ಭಯೋತ್ಪಾದಕ ದಾಳಿ ಈಗೀಗ ಹೆಚ್ಚುತ್ತಲೇ ಇದೆ. ಅವರಿಗೆ ಕಾನೂನಿನ ಭಯವಿಲ್ಲ. ಕಾನೂನು ಅವರನ್ನು ಏನೂ ಮಾಡುವುದಿಲ್ಲ. ಅವರನ್ನು ಕೇಳುವವರೂ ಇಲ್ಲ. ಹೇಳುವವರೂ ಇಲ್ಲ ಎಂಬ ಧೈರ್ಯ ಅವರಿಗಿದೆ. ನಾವು ಆಡಿದ್ದೇ ಆಟ ಎಂಬಂತಾಗಿದೆ. ಇನ್ನು ಗೋಮಾಂಸ ತಿನ್ನುತ್ತೇವೆ. ಸಂಘಿಗಳೇ ಏನು ಮಾಡುತ್ತೀರಾ? ಥೂ ನಿಮ್ಮ ಜನ್ಮಕ್ಕೆ, ಹದಿಹರೆಯದ ಮಕ್ಕಳನ್ನು ಕೂಡ ನೀವು ನೋಡುವುದಿಲ್ಲ. ನಿಮ್ಮ ಮನೆಯಲ್ಲಿ ಮಕ್ಕಳು ಇಲ್ಲವೇ ಸರ್ಕಾರ ಆದಷ್ಟು ಬೇಗ ಈ ನಾಯಿಗಳ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕು. ಗಂಜಿಮಠ ವ್ಯಾಪ್ತಿಯ ನಾರ್ಲಪದವು ಎಂಬಲ್ಲಿ ಒಡ್ಡೂರಿನ ಪ್ರದೀಪ್, ರಜಿತ್, ಸಂತೋಷ್, ಹಾಗೂ ಜನಾರ್ಧನ ಎಂಬ ಸಂಘಿ ಗೂಂಡಾಗಳಿಂದ ಮಲ್ಲರಪಟ್ಟಣದ ಅಮಾಯಕ ಮುಸ್ಲಿಂ ತಂದೆ ಮತ್ತು ಮಗಳ ಮೇಲೆ ಮಾರಣಾಂತಿಕ ಹಲ್ಲೆ” Muslim- Leader ಎಂದು ಟೈಪು ಮಾಡಿ ಪೋಸ್ಟ್ ಮಾಡಿರುವುದು ಅಲ್ಲದೇ instg4ama ಎಂಬ ಇನ್ಸ್ಟಾಗ್ರಾಂ ID ಯಲ್ಲಿ ಹಾಕಿದ್ದಸದ್ರಿ ಪೋಸ್ಟ್ ಗೆ “ ಇವರಿಗೆ ಸುಹಾಸ್ ಶೆಟ್ಟಿ ಟ್ರೀಟ್ ಮೆಂಟ್ ಕೊಡಬೇಕು ಸದ್ಯದಲ್ಲಿ” ಎಂದು ಕಾಮೆಂಟ್ ಮಾಡಿರುತ್ತಾರೆ.

ಸಾಮಾಜಿಕ ಜಾಲತಾಣದಲ್ಲಿ ವರ್ಗ ವರ್ಗಗಳನ್ನು ಮತ್ತು ಸಮುದಾಯವನ್ನು ಪ್ರಚೋದಿಸುವಂತೆ ಉದ್ದೇಶ ಪೂರ್ವಕವಾಗಿ ಪೋಸ್ಟ್ ಮಾಡಿರುವ ಹಾಗೂ ಸದ್ರಿ ಪೋಸ್ಟ್ ಗೆ ಸುಹಾಸ್ ಶೆಟ್ಟಿಯವರನ್ನು ಕೊಂದ ರೀತಿಯಲ್ಲಿ ಸದ್ಯದಲ್ಲಿ ಕೊಲ್ಲುತ್ತೇವೆ ಎಂದು ಬೆದರಿಕೆ ಹಾಕಿ ಕಮೆಂಟ್ ಮಾಡಿರುವವರ ವಿರುದ್ದ ಬಜಪೆ ಪೊಲೀಸರು ಮೊ.ನಂ 07/2026 ಕಲಂ 351(2), 351( 3), 352, 353(2),192 BNS-2023 ರಂತೆ ಸ್ವಯಂ ಪ್ರೇರಿತ ದೂರು ದಾಖಲಿಸಿಕೊಂಡು ತನಿಖೆ ನಡೆಸಿರುತ್ತಾರೆ. ಶೀಘ್ರದಲ್ಲೇ ಆರೋಪಿತರನ್ನು ಪತ್ತೆ ಮಾಡಿ ಮುಂದಿನ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಮಂಗಳೂರು ನಗರ ಪೊಲೀಸ್ ಕಮಿಷನರ್ ಪತ್ರಿಕಾ ಹೇಳಿಕೆಯಲ್ಲಿ ವಿವರಿಸಿದ್ದಾರೆ.‌

Leave a Reply

Your email address will not be published. Required fields are marked *

error: Content is protected !!