ವಿಟ್ಲದಲ್ಲಿ (ನಾಳೆ) “ಸಮಸ್ತ 100″ನೇ ಪ್ರಚಾರ ಸಮ್ಮೇಳನ
ವಿಟ್ಲ: ವಿಶ್ವ ವಿಖ್ಯಾತ ಉಲಮಾ ಸಂಘಟನೆಯಾದ ಸಮಸ್ತ ದ 100ನೇ ವಾರ್ಷಿಕದ ಅಂತರರಾಷ್ಟ್ರೀಯ ಸಮ್ಮೇಳನದ ಪ್ರಚಾರ ಸಮ್ಮೇಳನ ಜನವರಿ 4 ರ ಆದಿತ್ಯವಾರ ಮಧ್ಯಾಹ್ನ 3 ಗಂಟೆಗೆ ವಿಟ್ಲ ಕೇಂದ್ರ ಜುಮಾ ಮಸೀದಿ ಆವರಣದಲ್ಲಿ ವಿಟ್ಲ ವಲಯ ಎಸ್.ಕೆ.ಎಸ್.ಎಸ್.ಎಫ್ ವತಿಯಿಂದ ನಡೆಯಲಿದೆ.
ದ.ಕ.ಜಿಲ್ಲಾ ಖಾಝಿ ತ್ವಾಖ ಅಹಮದ್ ಮುಸ್ಲಿಯಾರ್ ಭಾಗವಹಿಸುವ ಈ ಪ್ರಚಾರ ಸಮ್ಮೇಳನದಲ್ಲಿ ಅಲಿ ಅಕ್ಬರ್ ಬಾಖವಿ ಮುಖ್ಯ ಪ್ರಭಾಷಣ ಮಾಡಲಿದ್ದಾರೆ.
ಸೈಯದ್ ಅಮೀರ್ ತಂಙಳ್ ಕಿನ್ಯ, ಶೈಖುನಾ ಬಂಬ್ರಾಣ ಉಸ್ತಾದ್, ಬಾಸಿತ್ ತಂಙಳ್, ಖಾಸಿಂ ದಾರಿಮಿ ಉಸ್ತಾದ್, ಆರಿಫ್ ಬಾಖವಿ ಉಸ್ತಾದ್ ಮುಂತಾದ ಉಲಮಾ ನೇತಾರರು ಈ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.




