January 31, 2026

ವಿಟ್ಲ: ರೇಡಿಯೋ, ಟೇಪ್ ರೆಕಾರ್ಡರ್, ಗ್ರಾಮಫೋನ್ ಹಾಗೂ ಧ್ವನಿವರ್ಧಕ ಸಂಗ್ರಹಗಾರ ವಿಟ್ಲದ ಇಸುಬು ಅವರಿಗೆ ಸನ್ಮಾನ

0
image_editor_output_image1955091469-1767342285286

ವಿಟ್ಲ: ವಿಟ್ಲದ ಕಾಶಿಮಠ ಕೆ. ಈಶ್ವರ ಭಟ್ ಮತ್ತು ಶ್ರೀಮತಿ ಲಾವಣ್ಯ ಭಟ್ ಅವರ ನೇತೃತ್ವದಲ್ಲಿ ಈಶ್ವರ್ ಭಟ್ ಕಾಶಿಮಠ ಅವರ 25ನೇ ವರ್ಷದ ವಿವಾಹ ವಾರ್ಷಿಕೋತ್ಸವದ ಸಮಾರಂಭ ವಿಟ್ಲದ ಮೇಗಿನಪೇಟೆ ನಿವಾಸಿ ಹಳೇ ವಸ್ತುಗಳ ಸಂಗ್ರಹಗಾರ ಇಸುಬು ಮೇಗಿನಪೇಟೆ ಅವರನ್ನು ಸನ್ಮಾನಿಸಲಾಯಿತು.

ಆದ್ರಾಮ ಮತ್ತು ಶ್ರೀಮತಿ ದುಲೈಕಾ ದಂಪತಿಗಳ ಪುತ್ರರಾಗಿರುವ ಯಂ, ಇಸುಬು ವಿಟ್ಲ ಮೇಗಿನಪೇಟೆ ಇವರು ಪ್ರಾಥಮಿಕ ಶಿಕ್ಷಣವನ್ನು ದ.ಕ.ಜಿ.ಪ ಪ್ರಾಥಮಿಕ ಶಾಲೆ ವಿಟ್ಲದಲ್ಲಿ ಪಡೆದಿರುವ ಇವರು ಕುಟುಂಬದ ಎಲ್ಲಾ ಪದಸ್ಯರನ್ನು ಸಲಹುವ ಕಾರ್ಯಕ್ಕೆ ಮುಂದಾಗಿ ತನ್ನ ವಿದ್ಯಾಭ್ಯಾಸವನ್ನು ಅರ್ಧಕ್ಕೆ ನಿಲ್ಲಿಸಿ ವಾಹನ ಪಾಲನೆಯಲ್ಲಿ ಪರಿಣತಿಯನ್ನು ಪಡೆದು ಸಮಾಜದ ಸಮಸ್ತ ಜನರಿಗೆ ಆದರ್ಶ ಪ್ರಿಯರಾಗಿದ್ದಾರೆ.

ಇವರು ತಿರುಪತಿ, ಮಂತ್ರಾಲಯ, ಶಬರಿಮಲೆಗೆ ನೂರಾರು ಸಲ ವಾಹನ ಚಲಾಯಿಸಿಕೊಂಡು ಯಾತ್ರಾರ್ಥಿಗಳನ್ನು ಕರೆದುಕೊಂಡು ಸುರಕ್ಷಿತವಾಗಿ ಹೋಗಿ ಬಂದು ಎಲ್ಲರ ಪ್ರೀತಿಯನ್ನು ಗಳಿಸಿದ ಇವರು ಅನುಸ್ಮರಣೀಯ ಹಳೆಯ ರೇಡಿಯೋ, ಟೇಪ್ ರೆಕಾರ್ಡರ್, ಗ್ರಾಮಫೋನ್ ಹಾಗೂ ಧ್ವನಿವರ್ಧಕ ಸಂಗ್ರಹಿಸುವ ಹವ್ಯಾಸ ಇರುವ ಇವರಲ್ಲಿ ಅನೇಕ ಹಳೆ ವಸ್ತುಗಳ ಸಂಗ್ರಹವಿದೆ.

ಪತ್ನಿ ರಝಿಯಾ, ಮಕ್ಕಳಾದ ಸುಹೖರ್, ಸಹಲ ಪಡೆದಿರುವ ಇವರಿಗೆ ಆ ಪರಮಾತ್ಮನು ಅಯುರಾ ರೋಗ್ಯ, ಸುಖಸಂಪತ್ತು ಕರುಣಿಸಲಿ ಎಂದು ಕೆ. ಈಶ್ವರ ಭಟ್, ಶ್ರೀಮತಿ ಲಾವಣ್ಯ ಭಟ್ ಮಕ್ಕಳಾದ ಶ್ರೀಕೃಷ್ಣ, ಶ್ರೀರಾಮ ಕಾಶೀಮಠ ಮತ್ತು ಮನೆಯವರು ದೇವರಲ್ಲಿ ಪ್ರಾರ್ಥಿಸುತ್ತಾ ಅಭಿನಂದನಾ ಪತ್ರವನ್ನು ನೀಡಿ, ಸನ್ಮಾನಿಸಿದರು.

Leave a Reply

Your email address will not be published. Required fields are marked *

error: Content is protected !!