ಧರ್ಮಸ್ಥಳ ಬುರುಡೆ ಪ್ರಕರಣ: ಧರ್ಮಸ್ಥಳ ಕ್ಷೇತ್ರದ ಪರ ನ್ಯಾಯಾಲಯದಲ್ಲಿ ವಕಾಲತ್ತು
ಬೆಳ್ತಂಗಡಿ: ದೇಶದ ಗಮನ ಸೆಳೆದಿದ್ದ ಧರ್ಮಸ್ಥಳ ಗ್ರಾಮದ ಬುರುಡೆ ಪ್ರಕರಣದಲ್ಲಿ ಇದೀಗ ಶ್ರೀಕ್ಷೇತ್ರ ಧರ್ಮಸ್ಥಳದ ಎಂಟ್ರಿಯಾಗಿದೆ. ಬೆಳ್ತಂಗಡಿ ನ್ಯಾಯಾಲಯಕ್ಕೆ ಖ್ಯಾತ ವಕೀಲ ಸಿ.ವಿ.ನಾಗೇಶ್ ಬುಧವಾರ (ಡಿ.31) ಆಗಮಿಸಿದ್ದು, ಧರ್ಮಸ್ಥಳ ಕ್ಷೇತ್ರದ ಪರ ನ್ಯಾಯಾಲಯದಲ್ಲಿ ವಕಾಲತ್ತು ಹಾಕಿದ್ದಾರೆ.
ಚಿನ್ನಯ್ಯ ದೂರು ನೀಡುವಾಗ ಧರ್ಮಸ್ಥಳದ ಕ್ಷೇತ್ರದ ಹೆಸರು ಉಲ್ಲೇಖಿಸಲಾಗಿತ್ತು. ಬಳಿಕ ಎಸ್‌ಐಟಿ ತನಿಖೆಯಲ್ಲಿ ಧರ್ಮಸ್ಥಳದ ಪಾತ್ರ ಇಲ್ಲ ಎಂಬುದು ವರದಿ ನೀಡಲಾಗಿತ್ತು. ಸಂಪೂರ್ಣ ಪ್ರಕರಣ ಬುರುಡೆ ಗ್ಯಾಂಗ್ ನಡೆಸಿದ ಷಡ್ಯಂತ್ರ ಎಂದು ಎಸ್‌ಐಟಿ ವರದಿ ನೀಡಿತ್ತು. ಹೀಗಾಗಿ ಇದೀಗ ಧರ್ಮಸ್ಥಳ ಕ್ಷೇತ್ರ ಸಂತ್ರಸ್ತರು ನೆಲೆಯಲ್ಲಿ ನ್ಯಾಯಾಲಯದಲ್ಲಿ ವಕಾಲತ್ತು ಹಾಕಲಾಗಿದೆ.
ಇಂದು ಕೋರ್ಟ್ ನಲ್ಲಿ ಎರಡು ಗಂಟೆ ಸಿ.ವಿ.ನಾಗೇಶ್ ವಾದ ಮಾಡಿದ್ದಾರೆ. ಧರ್ಮಸ್ಥಳ ಕ್ಷೇತ್ರ ಸಂತ್ರಸ್ತರು ಅಥವಾ ದೂರು ದಾಖಲಿಸಿಕೊಳ್ಳಲು ವಾದ ನಡೆಸಿದ್ದಾರೆ. ವಾದವನ್ನು ಮುಂದಿನ ಜ.3 ಕ್ಕೆ ನ್ಯಾಯಾಲಯ ಮುಂದೂಡಿದೆ.
ಖ್ಯಾತ ವಕೀಲ ಸಿ.ವಿ.ನಾಗೇಶ್ ಜೊತೆ ರಾಜಶೇಖರ್, ಮಹೇಶ್ ಕಜೆ ಭಾಗಿಯಾಗಿದ್ದರು.




