December 16, 2025

ಆರೋಗ್ಯ ನೀತಿಯಲ್ಲಿ ಕೇರಳ ಅಗ್ರ ಸ್ಥಾನ:
ಕೊನೆಯ ಸ್ಥಾನದಲ್ಲಿ ಉತ್ತರ ಪ್ರದೇಶ

0
image_editor_output_image-653867344-1640676723649.jpg

ದೆಹಲಿ: ನೀತಿ ಆಯೋವು ನಾಲ್ಕನೇ ಆರೋಗ್ಯ ಸೂಚ್ಯಂಕ ಬಿಡುಗಡೆ ಮಾಡಿದ್ದು, ದೊಡ್ಡ ರಾಜ್ಯಗಳ ಪೈಕಿ ಒಟ್ಟಾರೆ ಆರೋಗ್ಕಾರ್ಯಕ್ಷಮತೆಯ ವಿಷಯದಲ್ಲಿ ಕೇರಳ ಮತ್ತೆ ಅಗ್ರಸ್ಥಾನದಲ್ಲಿದೆ. ಆದರೆ ಉತ್ತರ ಪ್ರದೇಶ ರಾಜ್ಯವು ಆರೋಗ್ಯ ಕ್ಷಮತೆಯಲ್ಲಿ ಕಡೆಯ ಸ್ಥಾನದಲ್ಲಿದೆ.
ಆರೋಗ್ಯದ ಮಾನದಂಡಗಳಲ್ಲಿ ತಮಿಳುನಾಡು ಮತ್ತು ತೆಲಂಗಾಣ ಕ್ರಮವಾಗಿ ಎರಡು ಮತ್ತು ಮೂರನೇ ಅತ್ಯುತ್ತಮ ರಾಜ್ಯಗಳಾಗಿ ಹೊರಹೊಮ್ಮಿವೆ ಎಂದು ಸರ್ಕಾರದ ತಜ್ಞರು ಹೇಳಿದ್ದಾರೆ.

ಆರೋಗ್ಯ ನಿಯತಾಂಕಗಳಲ್ಲಿ ಕಳಪೆ ಪ್ರದರ್ಶನ ನೀಡಿದ ರಾಜ್ಯಗಳ ಪೈಕಿ ಬಿಹಾರ ಮತ್ತು ಮಧ್ಯಪ್ರದೇಶ ರಾಜ್ಯಗಳು ಕ್ರಮವಾಗಿ ಎರಡನೇ ಮತ್ತು ಮೂರನೇ ಸ್ಥಾನದಲ್ಲಿವೆ.
ಆದರೆ 2018-19ಕ್ಕೆ ಹೋಲಿಸಿದೆ 2019-20ರ ಅವಧಿಯಲ್ಲಿ ಉತ್ತರ ಪ್ರದೇಶವು ಕಾರ್ಯಕ್ಷಮತೆಯನ್ನು ಹೆಚ್ಚಿಸಿಕೊಳ್ಳುವಲ್ಲಿ ಗಮನ ಸೆಳೆದಿದೆ. ಕಾರ್ಯಕ್ಷಮತೆಯನ್ನುಹೆಚ್ಚಿಸಿಕೊಳ್ಳುತ್ತಿರುವ ಪೈಕಿ ಉತ್ತರ ಪ್ರದೇಶ ಅಗ್ರಸ್ಥಾನದಲ್ಲಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಸಣ್ಣ ರಾಜ್ಯಗಳ ಪೈಕಿ, ಮಿಜೋರಾಂ ಅತ್ಯುತ್ತಮ ಕಾರ್ಯಕ್ಷಮತೆ ಹೊಂದಿದೆ. ಕೇಂದ್ರಾಡಳಿತ ಪ್ರದೇಶಗಳ ಪೈಕಿ, ದೆಹಲಿ, ಜಮ್ಮು ಮತ್ತು ಕಾಶ್ಮೀರ ಆರೋಗ್ಯ ಕ್ಷಮತೆಯಲ್ಲಿ ಅಭಿವೃದ್ಧಿ ಕಾಣಬೇಕಾಗಿದೆ. ಆದರೆ ಕಾರ್ಯಕ್ಷಮತೆಯ ವಿಷಯದಲ್ಲಿ ಉತ್ತಮ ಪ್ರದರ್ಶನ ತೋರುತ್ತಿವೆ.
ಒಟ್ಟಾರೆಯಾಗಿ ಸತತ ನಾಲ್ಕನೇ ಸುತ್ತಿನಲ್ಲಿ ಕೇರಳ ಅತ್ಯುತ್ತಮ ಪ್ರದರ್ಶನ ತೋರಿದೆ. ವರದಿಯ ಪ್ರಕಾರ, ಕೇರಳ ಮತ್ತು ತಮಿಳುನಾಡು ರಾಜ್ಯಗಳು 2019-20ಕ್ಕೆ ಹೋಲಿಸಿದರೆ ಒಟ್ಟಾರೆ ಕಾರ್ಯಕ್ಷಮತೆಯ ವಿಷಯದಲ್ಲಿ ಅಗ್ರ ಸ್ಥಾನದಲ್ಲಿವೆ. ಆದರೆ ಹೆಚ್ಚುತ್ತಿರುವ ಕಾರ್ಯಕ್ಷಮತೆಯ ವಿಷಯದಲ್ಲಿ ಕ್ರಮವಾಗಿ ಹನ್ನೆರಡನೇ ಮತ್ತು ಎಂಟನೇ ಸ್ಥಾನದಲ್ಲಿವೆ.

ತೆಲಂಗಾಣವು ಒಟ್ಟಾರೆ ಪ್ರದರ್ಶನ ಮತ್ತು ಹೆಚ್ಚುತ್ತಿರುವ ಕಾರ್ಯಕ್ಷಮತೆ ಎರಡರಲ್ಲೂ ಉತ್ತಮ ಪ್ರದರ್ಶನ ನೀಡಿದೆ. ಎರಡೂ ವಿಭಾಗಗಳಲ್ಲೂ ಮೂರನೇ ಸ್ಥಾನವನ್ನು ಪಡೆದುಕೊಂಡಿದೆ.
ಒಟ್ಟಾರೆ ಪ್ರದರ್ಶನ ಮತ್ತು ಹೆಚ್ಚುತ್ತಿರುವ ಕಾರ್ಯಕ್ಷಮತೆ ಎರಡರಲ್ಲೂ ರಾಜಸ್ಥಾನ ದುರ್ಬಲ ಪ್ರದರ್ಶನ ತೋರಿದೆ. ಸಣ್ಣ ರಾಜ್ಯಗಳ ಪೈಕಿ ಮಿಜೋರಾಂ ಮತ್ತು ತ್ರಿಪುರಾ ಕಾರ್ಯಕ್ಷಮತೆಯಲ್ಲಿ ಗಮನ ಸೆಳೆದಿವೆ.

Leave a Reply

Your email address will not be published. Required fields are marked *

error: Content is protected !!