March 21, 2026

ಮಂಗಳೂರು CISF ಇನ್ಸ್ ಪೆಕ್ಟರ್ ನಾಪತ್ತೆ

0
images1533754598.png

ಮಂಗಳೂರು: ಕುತ್ತೆತೂರು ಗ್ರಾಮದ ಎಂ.ಆರ್.ಪಿ.ಎಲ್. ಕಂಪೆನಿಯ ಸಿ.ಐ.ಎಸ್.ಎಫ್. ಯೂನಿಟ್‍ನಲ್ಲಿ ಇನ್ಸ್ಪೆಕ್ಟರ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ ವ್ಯಕ್ತಿಯೋರ್ವರು ನಾಪತ್ತೆಯಾಗಿದ್ದಾರೆ.

ಡಿಗ್ಗಿ ಡಿ.ಎಸ್ (34 ) ಎಂಬವರು ಕಾಣೆಯಾಗಿರುವ ಬಗ್ಗೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಡಿಗ್ಗಿ ಅವರು 2021ರ ಡಿ.20 ರಂದು ಸಿ.ಐ.ಎಸ್.ಎಫ್ ಕ್ಯಾಂಪಸ್‍ನ ಬ್ಯಾಚುಲರ್ ಬ್ಯಾರಕ್‍ನಿಂದ ಕಾಣೆಯಾಗಿದ್ದು, ಈ ಬಗ್ಗೆ ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಇವರು ನಸು ಕಪ್ಪು ಮೈ ಬಣ್ಣ, ಸಾಧಾರಣ ಶರೀರ ಹೊಂದಿದ್ದು, 165 ಸೆಂಟಿ ಮೀಟರ್ ಎತ್ತರ ಇರುತ್ತಾರೆ. ಹಿಂದಿ, ಮರಾಠಿ ಭಾಷೆ ಮಾತನಾಡುವ. ಇವರ ಬಗ್ಗೆ ಮಾಹಿತಿ ಲಭ್ಯವಾದರೆ ಸುರತ್ಕಲ್ ಪೊಲೀಸ್ ಠಾಣೆಗೆ ಮಾಹಿತಿ ನೀಡುವಂತೆ ಪೊಲೀಸರು ಕೋರಿದ್ದಾರೆ.

Leave a Reply

Your email address will not be published. Required fields are marked *

error: Content is protected !!