ವಿಟ್ಲ: ಎಮಿನೆಂಟ್ ವಿದ್ಯಾಸಂಸ್ಥೆ ವಾರ್ಷಿಕೋತ್ಸವ: ಗುರಿಯೊಂದಿಗೆ ಶಿಕ್ಷಣವನ್ನು ಕಲಿಯಿರಿ: ಡಾ. ಕಿರಾಸ್ ಪರ್ತಿಪ್ಪಾಡಿ
ವಿಟ್ಲ: ಎಮಿನೆಂಟ್ ವಿದ್ಯಾಸಂಸ್ಥೆ ವಿಟ್ಲ ಹಾಗೂ ಮೆಲ್ಕಾರ್ ಇದರ ವಾರ್ಷಿಕೋತ್ಸವವು ದಿನಾಂಕ 25-11-2025 ನೇ ಮಂಗಳವಾರ ಜನಪ್ರಿಯ ಗಾರ್ಡನ್ ನೇರಳಕಟ್ಟೆ ಮಾಣಿ ಇಲ್ಲಿ ಬಹಳ ವಿಜೃಂಭಣೆಯಿಂದ ಸಂಸ್ಥೆಯ ಮುಖ್ಯಸ್ಥರಾದ ಝುಬೈರ್.ಪಿ ಇವರ ಅಧ್ಯಕ್ಷತೆಯಲ್ಲಿ ನಡೆಯಿತು.

ಮುಖ್ಯ ಅತಿಥಿಯಾಗಿ ಆಗಮಿಸಿದ ಡಾ.ಕಿರಾಸ್ ಪರ್ತಿಪ್ಪಾಡಿ (ಸಿಇಒ ಮತ್ತು ವ್ಯವಸ್ಥಾಪಕ ನಿರ್ದೇಶಕರು ಜನಪ್ರಿಯ ಮಲ್ಟಿ ಸ್ಪೆಷಾಲಿಟಿ ಹಾಸ್ಪಿಟಲ್ ಮಂಗಳೂರು) ಇವರು ಮಾತನಾಡಿ ಗುರಿಯೊಂದಿಗೆ ಶಿಕ್ಷಣವನ್ನು ಕಲಿಯಬೇಕೆಂದು ಕಿವಿ ಮಾತನ್ನು ನೀಡಿದರು.
ಅತಿಥಿಯಾಗಿ ಫಾ.ಅಮಿತ್ ಪ್ರಕಾಶ್ ರೋಡ್ರಿಗಸ್ (ಪ್ರಾಂಶುಪಾಲರು ಸೈಂಟ್ ರೀಟಾ ಆಂಗ್ಲ ಮಾಧ್ಯಮ ಶಾಲೆ ವಿಟ್ಲ) ಇವರು ಮಾತನಾಡಿ ಶಿಕ್ಷಣದ ಪ್ರಾಮುಖ್ಯತೆಯನ್ನು ವಿವರಿಸಿದರು. ಮನಾಝಿರ್ (ಪ್ರಾಂಶುಪಾಲರು ಹೊರೈಝನ್ ಪಬ್ಲಿಕ್ ಸ್ಕೂಲ್ ಮೇಗಿನಪೇಟೆ) ಇವರು ಮಾತನಾಡಿ ಸಂಸ್ಥೆಯ ವಿದ್ಯಾಭ್ಯಾಸದ ಬಗ್ಗೆ ಉದಾಹರಣೆಯೊಂದಿಗೆ ವಿವರಿಸಿದರು. ಕಿರಣ್ ಕುಮಾರ್ ಬ್ರಹ್ಮಾವರ (ಉಪ ಪ್ರಾಂಶುಪಾಲರು ವಿಠಲ ವಿದ್ಯಾಸಂಸ್ಥೆ ವಿಟ್ಲ) ಮಾತನಾಡಿ ಈ ಸಂಸ್ಥೆಯಲ್ಲಿ NEET,CET ಹಾಗೂ IIT ಮುಂತಾದ ಪ್ರವೇಶ ಪರೀಕ್ಷೆಗಳಿಗೆ ಬೇಕಾದ ತರಗತಿಗಳನ್ನು ಆರಂಭಿಸುವ ಬಗ್ಗೆ ಪ್ರೋತ್ಸಾಹಿಸಿದರು. ರಶೀದ್ ವಿಟ್ಲ ಜಂ ಇಯ್ಯತುಲ್ ಫಲಾಹ್ ಇದರ ಮಾಜಿ ಅಧ್ಯಕ್ಷರು ಮಾತನಾಡಿ ಸಂಸ್ಥೆಯ ಘನತೆಯನ್ನು ವಿವರಿಸುತ್ತಾ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.
ವಿಟ್ಲ ಸಂಸ್ಥೆಯ ಪ್ರಾಂಶುಪಾಲರಾದ ಸೆಫಿಯ, ಮೆಲ್ಕಾರ್ ಸಂಸ್ಥೆಯ ಪ್ರಾಂಶುಪಾಲರಾದ ಎಂ.ಎಸ್.ಅನ್ಸಾರ್ ಹಾಗೂ ITI ಇದರ ಪ್ರಾಂಶುಪಾಲರಾದ ಮುಝಮ್ಮಿಲ್ ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಉಪನ್ಯಾಸಕ ಶ್ರೀ ರಮನ ಭಾರದ್ವಜ್ ಸ್ವಾಗತಿಸಿದರು. ಬಹುಮಾನ ವಿಜೇತ ಮಕ್ಕಳ ಪಟ್ಟಿಯನ್ನು ಉಪನ್ಯಾಸಕಿ ಮುಫೀದ ಓದಿದರು. ಕುಮಾರಿ ಕವನ ಕುಂಬ್ರ ಹಾಗೂ ರಚನಾ ಕಾರ್ಯಕ್ರಮವನ್ನು ನಿರೂಪಿಸಿದರು. ಉಪನ್ಯಾಸಕಿ ಪ್ರತಿಭಾ ಕಾರ್ಯಕ್ರಮವನ್ಯು ವಂದಿಸಿದರು.





