ರಿಫಾಯಿ ಜುಮಾ ಮಸ್ಜಿದ್ ಜೋಗಿಬೆಟ್ಟು: ನವೀಕೃತ ಜುಮಾ ಮಸ್ಜಿದ್ ಉದ್ಘಾಟನಾ ಸಮಾರಂಭ ಮತ್ತು ಜಿಲ್ಲಾ ಮಟ್ಟದ ದಫ್ ಸ್ಪರ್ಧೆ
ಬೆಳ್ತಂಗಡಿ: ರಿಫಾಯಿ ಜುಮಾ ಮಸ್ಜಿದ್ ಜೋಗಿಬೆಟ್ಟು ಇದರ ನವೀಕೃತ ಜುಮಾ ಮಸ್ಜಿದ್ ಉದ್ಘಾಟನಾ ಸಮಾರಂಭ, ಬೃಹತ್ ರಿಫಾಯಿಯ ರಾತೀಬ್ ಮಜ್ಲಿಸ್ ಮತ್ತು ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿ ಸಹಯೋಗದೊಂದಿಗೆ ದಕ್ಷಿಣ ಕನ್ನಡ ಜಿಲ್ಲಾ ಮಟ್ಟದ ದಫ್ ಸ್ಪರ್ಧೆ ಕಾರ್ಯಕ್ರಮವು ಡಿಸೆಂಬರ್ 19 ಮತ್ತು 20 ತಾರೀಖಿನಂದು ನಡೆಯಲಿದೆ.
ನವೀಕೃತ ಜುಮಾ ಮಸ್ಜಿದ್ ಉದ್ಘಾಟನೆಯನ್ನು ಡಿಸೆಂಬರ್ 19 ರಂದು ಶುಕ್ರವಾರ ಮಧ್ಯಾಹ್ನ 12 ಘಂಟೆಗೆ ಬಹು| ಅಸಯ್ಯದ್ ಕೆ.ಎಸ್ ಆಟಕೋಯ ತಂಙಳ್ ಕುಂಬೋಲ್ ನಡೆಸಲಿದ್ದಾರೆ. ಮಗರಿಬ್ ನಮಾಝ್ ಬಳಿಕ ರಿಫಾಯಿಯ ರಾತೀಬ್ ಮಜ್ಲಿಸ್ ಗೆ ಬಹು| ಸಯ್ಯಿದ್ ಕೆ.ಎಸ್ ಅಹಮ್ಮದ್ ಮುಖ್ತಾರ್ ತಂಙಳ್ ಕುಂಬೋಳ್ ನೇತೃತ್ವ ನೀಡಲಿದ್ದಾರೆ.
ಕಾರ್ಯಕ್ರಮದ ಗೌರವ ಉಪಸ್ಥಿತಿಯಲ್ಲಿ ಅಲ್ ಹಾಜ್ ಯು.ಕೆ ಖಲಂದರ್ ಮದನಿ (ಖತೀಬರು ರಿಫಾಯಿಯ ಜುಮಾ ಮಸ್ಜಿದ್ ಜೋಗಿಬೆಟ್ಟು), ಯು.ಟಿ ಖಾದರ್ ಫರೀದ್ (ಸಭಾಧ್ಯಕ್ಷರು ಕರ್ನಾಟಕ ವಿಧಾನಸಭೆ), ಝಕರಿಯಾ ಜೋಕಟ್ಟೆ (ಚೆಯರ್ಮೆನ್ ಎಂ.ಫ್ರೆಂಡ್ಸ್ ಚಾರಿಟೇಬಲ್ ಟ್ರಸ್ಟ್ ಮಂಗಳೂರು), ಉಮರ್ ಉ.ಎಚ್ ( ಅಧ್ಯಕ್ಷರು ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿ) ಹಾಗೂ ಅನೇಕ ಉಲಮಾ, ಉಮರಾ ನಾಯಕರು ಭಾಗವಹಿಸಲಿದ್ದಾರೆ.
ಡಿಸೆಂಬರ್ 20ರಂದು ಶನಿವಾರ ಅಸರ್ ನಮಾಝ್ ಬಳಿಕ ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿ ಇದರ ಸಹಯೋಗದೊಂದಿಗೆ ದಕ್ಷಿಣ ಕನ್ನಡ ಜಿಲ್ಲಾ ಮಟ್ಟದ ದಫ್ ಸ್ಪರ್ಧೆ ನಡೆಯಲಿದೆ.





