ವಿಟ್ಲ ಜೆಸಿಐ ಘಟಕ ವಿಟ್ಲ ಇದರ 2026 ನೇ ಸಾಲಿನ ಅಧ್ಯಕ್ಷ ಮತ್ತು ಇತರ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮ: ನೂತನ ಅಧ್ಯಕ್ಷ ಸಂದೀಪ್ ಮತ್ತು ತಂಡದಿಂದ ಅಧಿಕಾರ ಸ್ವೀಕಾರ
ವಿಟ್ಲ: ಜೆಸಿಐ ಘಟಕ ವಿಟ್ಲ ಇದರ 2026 ನೇ ಸಾಲಿನ ಅಧ್ಯಕ್ಷ ಮತ್ತು ಇತರ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮ ವಿಟ್ಠಲ ಪದವಿ ಪೂರ್ವ ಕಾಲೇಜಿನ ಸುವರ್ಣ ರಂಗ ಮಂದಿರದಲ್ಲಿ ನಡೆಯಿತು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ ವಲಯ 15 ರ ಅಧ್ಯಕ್ಷ ಸಂತೋಷ್ ಕುಮಾರ್ ಶೆಟ್ಟಿ ಪದಗ್ರಹಣ ಕಾರ್ಯಕ್ರಮ ನೆರವೇರಿಸಿದರು. ಅತಿಥಿಗಳಾಗಿ ಕಾರ್ಕಳ ಭುವನೇಂದ್ರ ಕಾಲೇಜಿನ ಉಪನ್ಯಾಸಕ ಗಣೇಶ್ ಜಾಲ್ಸೂರು ಮತ್ತು ಜೆಸಿ ವಲಯದ ಉಪಾಧ್ಯಕ್ಷ ಜಿತೇಶ್ ಪಿರೇರ ಇವರು ಭಾಗವಹಿಸಿದ್ದರು.
ವಿಟ್ಲ ಜೆಸಿಐ ಅಧ್ಯಕ್ಷೆ ಸೌಮ್ಯ ಚಂದ್ರಹಾಸ ಅಧ್ಯಕ್ಷತೆ ವಹಿಸಿದ್ದರು. ನೂತನ ಅಧ್ಯಕ್ಷರಾಗಿ ಸಂದೀಪ್ ಎಸ್, ಕಾರ್ಯದರ್ಶಿಯಾಗಿ ಆರ್ಥಿಕ್ ಪಿ, ಲೇಡಿ ಜೆಸಿ ಕೋ ಆರ್ಡಿನೇಟರ್ ಆಗಿ ಮೇಘಾ ಸಂದೀಪ್, ಜೆಜೆಸಿ ಆಗಿ ದ್ವಿಶಾ ಬಿ ಹಾಗೂ ಇತರೆ ಪದಾಧಿಕಾರಿಗಳು ಅಧಿಕಾರ ಸ್ವೀಕರಿಸಿದರು.
ಅಶ್ವಿನಿ ದಿನೇಶ್ ಮತ್ತು ಶಾನ್ ಲೆನ್ವಿನ್ ಮಸ್ಕರೇನಸ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಸೌಮ್ಯ ಚಂದ್ರಹಾಸ ಸ್ವಾಗತಿಸಿ ನಿರೂಪಿಸಿದರು. ಆರ್ಥಿಕ್ ವಂದಿಸಿದರು. ರಾಧಾಕೃಷ್ಣ ಎರುಂಬು, ನೀತಾ ಎಸ್, ಹರ್ಶಿತ್ ಮತ್ತು ವರ್ಷಿಣಿ ಸಹಕರಿಸಿದರು.





