ಬಸ್ಸಿಗೆ ಬೈಕ್ ಢಿಕ್ಕಿ: ಯುವಕ ಸ್ಥಳದಲ್ಲೇ ಮೃತ್ಯು
ಬೆಂಗಳೂರು: ಬಸ್ಸಿಗೆ ಬೈಕ್ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಚಲಾಯಿಸುತ್ತಿದ್ದ ಯುವಕ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಬೆಂಗಳೂರು – ತುಮಕೂರು 48 ಹೆದ್ದಾರಿಯ ಮಾದನಾಯಕನಹಳ್ಳಿ ಬಳಿ ನಡೆದಿದೆ.
ನಾಗಸಂದ್ರದ ವಿದ್ಯಾನಗರ ನಿವಾಸಿ ಸುಮಂತ್ ಜೆ ಗೌಡ (21) ಮೃತ ಬೈಕ್ ಸವಾರ. ಸ್ನೇಹಿತನನ್ನ ನೋಡಲು ಹೋಗುತ್ತಿದ್ದ ವೇಳೆ ಅಪಘಾತ ಸಂಭವಿಸಿದೆ.
ಚಲಿಸುತ್ತಿದ್ದ ಖಾಸಗಿ ಬಸ್ ನಿಲ್ಲಿಸಿದ ಪರಿಣಾಮ ಹಿಂದೆ ಬೈಕ್‌ನಲ್ಲಿ ಬರುತ್ತಿದ್ದ ಸುಮಂತ್ ಕಂಟ್ರೋಲ್ ಸಿಗದೇ ಬಸ್ಸಿಗೆ ಡಿಕ್ಕಿ ಹೊಡೆದಿದ್ದಾನೆ. ಅಪಘಾತದ ಪರಿಣಾಮ ಸುಮಂತ್ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಘಟನೆ ಸಂಬಂಧ ನೆಲಮಂಗಲ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.




