ಉಡುಪಿ: ಯುವತಿಯ ಮೇಲೆ ಅತ್ಯಾಚಾರಗೈದು ಕೊಲೆಗೆ ಯತ್ನ: ಸಂಘ ಪರಿವಾರದ ಕಾರ್ಯಕರ್ತನ ಬಂಧನ
ಉಡುಪಿ: ಮದುವೆಗೆ ನಿರಾಕರಿಸಿದ ಯುವತಿಯ ಮೇಲೆ ಅತ್ಯಾಚಾರಗೈದು ಕೊಲೆ ಯತ್ನ ಮಾಡಿದ ಆರೋಪದ ಮೇಲೆ, ಹಿಂದೂ ಪರ ಸಂಘಟನೆಯ ಕಾರ್ಯಕರ್ತನನ್ನು ಉಡುಪಿ ಪೊಲೀಸರು ಬಂಧಿಸಿದ್ದಾರೆ.
ಪೆರ್ಡೂರಿ ಪ್ರದೀಪ್ ಪೂಜಾರಿ(26) ಬಂಧಿತ ಆರೋಪಿಯಾಗಿದ್ದಾನೆ. ಪ್ರದೀಪ್ ಪೂಜಾರಿ ನಿರ್ಜನ ಪ್ರದೇಶದಲ್ಲಿ ನಡೆದುಕೊಂಡು ಹೋಗುತ್ತಿದ್ದ ಯುವತಿಯನ್ನು ಮದುವೆಯಾಗುವಂತೆ ಒತ್ತಾಯಿಸಿದ್ದ. ಇದಕ್ಕೆ ಯುವತಿ ವಿರೋಧ ವ್ಯಕ್ತಪಡಿಸಿದಕ್ಕೆ ಆಕೆಯ ಕತ್ತು ಹಿಸುಕಿ ಬೆದರಿಸಿ ಅತ್ಯಾಚಾರ ಎಸಗಿದ್ದ ಎಂದು ಆರೋಪಿಸಲಾಗಿದೆ. ಯುವತಿ ಮದುವೆಗೆ ನಿರಾಕರಿಸಿದ ಹಿನ್ನೆಲೆಯಲ್ಲಿ ಆಕೆಯನ್ನು ಹಾಡಿಯಲ್ಲಿ ಹಿಂಬಲಿಸಿ ಈ ಕೃತ್ಯ ಎಸಗಿದ್ದಾನೆ ಎನ್ನಲಾಗಿದೆ. ಅಲ್ಲಿದ್ದ ತಪ್ಪಿಸಿಕೊಂಡ ಸಂತ್ರಸ್ಥೆ ಬಳಿಕ ತನ್ನ ಮನೆಯವರಿಗೆ ಮಾಹಿತಿ ನೀಡಿದ್ದಾಳೆ.
ಯುವತಿಯೊಂದಿಗೆ ಮಹಿಳಾ ಠಾಣೆಗೆ ಆಗಮಿಸಿದ ಪೋಷಕರು ಯುವಕನ ವಿರುದ್ದ ದೂರು ದಾಖಲಿಸಿ ಆರೋಪಿ ಪ್ರದೀಪ್ ಪೂಜಾರಿಯನ್ನು ಬಂಧಿಸಿ ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದ್ದಾರೆ. ಆರೋಪಿ ಪ್ರದೀಪ್‌ನನ್ನು ಪೊಲೀಸರು ನ್ಯಾಯಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಲಯವು ಆರೋಪಿಗೆ ನ್ಯಾಯಾಂಗ ಬಂಧನ ವಿಧಿಸಿದೆ.




