ವಿಟ್ಲ: ಬೈಕ್ ಗೆ ನಾಯಿ ಅಡ್ಡ ಬಂದು ಅಪಘಾತ: ಸವಾರನಿಗೆ ಗಾಯ
ವಿಟ್ಲ: ದ್ವಿಚಕ್ರ ವಾಹನ ಚಲಾಯಿಸುತ್ತಿದ್ದ ವ್ಯಕ್ತಿಗೆ ನಾಯಿ ಅಡ್ಡ ಬಂದಾಗ ಒಮ್ಮೆಲೆ ಬ್ರೇಕ್ ಹಾಕಿ ಅಪಘಾತ ಸಂಭವಿಸಿದ್ದು ಆತನನ್ನು ಸ್ಥಳೀಯರು ಆಸ್ಪತ್ರೆಗೆ ದಾಖಲಿಸಿದ ಘಟನೆ ಸಂಭವಿಸಿದೆ.
ಬೋಳಂತೂರು ಗ್ರಾಮದ ಉಮೇಶ ಅವರು ಬೋಳಂತೂರು ವೀರಕಂಬ ರಸ್ತೆಯಲ್ಲಿ ವೀರಕಂಬ ಕಡೆಯಿಂದ ಬೋಳಂತೂರು ಕಡೆಗೆ ದ್ವಿಚಕ್ರ ವಾಹನ ಚಲಾಯಿಸುತ್ತಿದ್ದಾಗ ವೀರಕಂಬದಲ್ಲಿ, ನಾಯಿಯೊಂದು ಅಡ್ಡಲಾಗಿ ಬಂದಿದೆ. ತತ್ ಕ್ಷಣ ಬ್ರೇಕ್ ಹಾಕಿದಾಗ ರಸ್ತೆಗೆ ಬಿದ್ದಿದ್ದು ಗಂಭೀರ ಗಾಯಗೊಂಡಿದ್ದಾರೆ.
ಅವರನ್ನು ಕೂಡಲೇ ಶರತ್ ಎಂಬವರು ಚಿಕಿತ್ಸೆಗಾಗಿ ಬಂಟ್ವಾಳ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಬಂದು, ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಬಗ್ಗೆ ವಿಟ್ಲ ಪೊಲೀಸ್ ಠಾಣೆಯಲ್ಲಿ ಹರೀಶ ನಾಯ್ಕ ಅವರು ದೂರು ನೀಡಿದ್ದು, ಪ್ರಕರಣ ದಾಖಲಾಗಿದೆ.





