ವಿಟ್ಲ: ಎಟಿಎಂ ನಲ್ಲಿ ಮಹಿಳೆಯ ಲಕ್ಷಾಂತರ ರೂ. ವಂಚಿಸಿದ ಅಪರಿಚಿತರು
ವಿಟ್ಲ: ಇಡ್ಕಿದು ಗ್ರಾಮದ ಉರಿಮಜಲು ನಿವಾಸಿ ಮಹಿಳೆಗೆ ವಿಟ್ಲದಲ್ಲಿ ಎಟಿಎಂ ಕಾರ್ಡ್ ಮೂಲಕ ಹಣ ಪಡೆದುಕೊಂಡು ಹೊರಬರುತ್ತಿದ್ದಾಗ ಇಬ್ಬರು ಅಪರಿಚಿತ ವ್ಯಕ್ತಿಗಳು ಮೋಸ ಮಾಡಿ ಲಕ್ಷಕ್ಕೂ ಅಧಿಕ ಮೊತ್ತ ಮೋಸ ಮಾಡಿದ ಘಟನೆ ಸಂಭವಿಸಿದೆ.
ದಾಮೋದರ ಪೂಜಾರಿ ಅವರ ಪತ್ನಿ ಗೀತಾ ಅವರು ಆರೋಗ್ಯ ಸರಿಯಿಲ್ಲದ ಕಾರಣ ಕೆನರಾ ಬ್ಯಾಂಕಿನ ಎಟಿಎಂನಿಂದ ಹಣ ಡ್ರಾ ಮಾಡಲು ವಿಟ್ಲ ಕಸಬಾ ಗ್ರಾಮದ ಫಾತಿಮ ಬಿಲ್ಡಿಂಗ್ ನಲ್ಲಿರುವ ಎಸ್ ಬಿ ಐ ಎಟಿಎಂ ಹತ್ತಿರ ತೆರಳಿದಾಗ ಒಳಗಡೆ ಇಬ್ಬರು ಅಪರಿಚಿತ ವ್ಯಕ್ತಿಗಳು ಇದ್ದರು. ಒಳಗೆ ಹೋಗಿ ೬೦೦೦/-ರೂ ಹಣ ಡ್ರಾ ಮಾಡಿ ವಾಪಾಸ್ ಹೊರಗಡೆ ಬಂದಾಗ ಅಪರಿಚಿತರನ್ನು ಕರೆದು ಹಿಂದಿ ಭಾಷೆಯಲ್ಲಿ ಎಟಿಎಂಅನ್ನು ಸರಿಯಾಗಿ ಮುಚ್ಚಬೇಕೆಂದು ತಿಳಿಸಿದ್ದರು. ಅದರಂತೆ ಆಕೆ ಒಳಗೆ ಹೋಗಿ ನೋಡಿ ಹೊರಗಡೆ ಬರುವಾಗ ಆ ಸಮಯ ಅಪರಿಚಿತ ವ್ಯಕ್ತಿಗಳು ಎಟಿಎಂ ಕಾರ್ಡ್ ಬೇರೆ ಬೇರೆ ಆಗಿದೆ ಎಂದು ತಿಳಿಸಿ ಅವರ ಕೈಯಲ್ಲಿದ್ದ ಕಾರ್ಡನ್ನು ಗೀತಾ ಅವರಿಗೆ ನೀಡಿ ಅವರು ತೆಗೆದುಕೊಂಡಿದ್ದರು. ಅನಂತರ ಗೀತಾ ಮನೆಗೆ ಬಂದು ರಾತ್ರಿ ಮೊಬೈಲ್ ನೋಡುವಾಗ ಖಾತೆಯಲ್ಲಿದ್ದ ಸುಮಾರು ೧.೧೯ ಲಕ್ಷ ಡ್ರಾ ಆಗಿರುವ ಬಗ್ಗೆ ಸಂದೇಶ ಬಂದಿದೆ. ಈ ಬಗ್ಗೆ ವಿಟ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.





