ವಿಟ್ಲ: ಮಹಿಳೆಗೆ ಮಲ್ಲಿಗೆ ಕೃಷಿಯಲ್ಲಿ ಲಾಭದ ಆಮಿಷವೊಡ್ಡಿ ೭೦ ಲಕ್ಷ ರೂ. ವಂಚನೆ
ವಿಟ್ಲ: ವಿಟ್ಲದ ಮಹಿಳೆಗೆ ಪರಿಚಯಸ್ಥರೇ ಮಲ್ಲಿಗೆ ಕೃಷಿಯಲ್ಲಿ ಲಾಭದ ಆಮಿಷವೊಡ್ಡಿ ಹಂತ ಹಂತವಾಗಿ ೭೦ ಲಕ್ಷ ರೂ ವಂಚನೆ ಮಾಡಿದ ಘಟನೆ ಸಂಭವಿಸಿದೆ.
ಕಡಂಬು ನಿವಾಸಿ ಬೀನಾ ರಾಡ್ರಿಗಸ್ ಅವರು ವಂಚನೆಗೊಳಗಾದವರು. ಫಿಲೋಮಿನಾ ಡಿ’ ಸೋಜಾ ವಂಚಿಸಿದ ಆರೋಪಿ.
೨೦೨೪ನೇ ಇಸವಿಯ ಅಕ್ಟೋಬರ್ ತಿಂಗಳಲ್ಲಿ ಫಿಲೋಮಿನಾ ಡಿ ಸೋಜಾ ಅವರು ಬೀನಾ ರಾಡ್ರಿಗಸ್ ಅವರಲ್ಲಿ ಮಲ್ಲಿಗೆ ಕೃಷಿಗಾಗಿ ತಾನು ಸರ್ಕಾರದಿಂದ ಸಾಲ ಪಡೆಯುತ್ತಿದ್ದು ಅದರಲ್ಲಿ ಹೆಚ್ಚಿನ ಸಬ್ಸಿಡಿ ಹಣ ಸಿಗಲಿದೆ. ಅದರಲ್ಲಿ ಪಾಲು ಹಣವನ್ನು ನೀಡುತ್ತೇನೆ ಎಂದು ಹೇಳಿದ ಆರೋಪಿ ಅರ್ಜಿ ಹಾಕಲು ಆರಂಭದಲ್ಲಿ ೩೦,೦೦೦/- ಹಣವನ್ನು ಕಟ್ಟಬೇಕಾಗುತ್ತದೆ ಎಂಬ ಹೇಳಿಕೆಯನ್ನು ನಂಬಿ, ಹಣವನ್ನು ನೀಡಲಾಗಿತ್ತು. ಬಳಿಕ ಜಿಲ್ಲಾಧಿಕಾರಿಯವರ ಸೂಚನೆಯ ಮೇರೆಗೆ ಉದ್ಯೋಗ ಖಾತರಿಯಲ್ಲಿ ೧೦ ಲಕ್ಷ ಕಟ್ಟಿದಲ್ಲಿ ಇನ್ನೂ ೧೦ ಲಕ್ಷ ಹೆಚ್ಚುವರಿ ಸಾಲ ದೊರೆಯುತ್ತದೆ. ಅದರಲ್ಲಿ ೭೫% ಮನ್ನಾ ಆಗುತ್ತದೆ ಎಂದು ನಂಬಿಸಿ ಸಬ್ಸಿಡಿ ಮೌಲ್ಯವನ್ನು ೧೦ ಲಕ್ಷಕ್ಕೆ ಏರಿಸಲು ಹೆಚ್ಚುವರಿ ಹಣವನ್ನು ಪಾವತಿಸುವಂತೆ ಹೇಳಿದ್ದಲ್ಲದೇ ಅನಂತರ ಒಂದೊಂದು ಕಾರಣವನ್ನು ಹೇಳುತ್ತ ಮಲ್ಲಿಗೆ ಕೃಷಿಗಾಗಿ ಸರ್ಕಾರದಿಂದ ಬರುವ ಸಬ್ಸಿಡಿಯಲ್ಲಿ ಪಾಲು ಹಣ ಕೊಡಿಸುವುದಾಗಿ ನಂಬಿಸಿ ಹಣವನ್ನು ಪಡೆದುಕೊಂಡು ಅ.೩, ೨೦೨೪ರಿಂದ ನ.೧೯, ೨೦೨೫ವರೆಗೆ ಹಂತ ಹಂತವಾಗಿ ಒಟ್ಟು ೭೦,೦೦,೦೦೦/- ಲಕ್ಷ ರೂಪಾಯಿ ವಂಚಿಸಲಾಗಿದೆ. ಈ ಬಗ್ಗೆ ವಿಟ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.





