ಪೊಲೀಸರ ಸೋಗಿನಲ್ಲಿ ಲೇಡಿಸ್ ಪಿಜಿ ಮೇಲೆ ದಾಳಿ, ದರೋಡೆ: ಆರು ಮಂದಿ ಆರೋಪಿಗಳ ಬಂಧನ
ಬೆಂಗಳೂರು : ಪೊಲೀಸರ ಸೋಗಿನಲ್ಲಿ ಲೇಡಿಸ್ ಪಿಜಿ ಮೇಲೆ ದಾಳಿ ಮಾಡಿ ದರೋಡೆ ಮಾಡಿದ್ದ ಗ್ಯಾಂಗನ್ನು ಬೆಂಗಳೂರು ಪೊಲೀಸರು ಹಡೆಮುರಿ ಕಟ್ಟಿದ್ದು ಆರು ಮಂದಿಯನ್ನು ಬಂಧಿಸಿದ್ದಾರೆ.
ನಗರದ HAL ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು ಬಂಧಿತ ಆರೋಪಿಗಳಲ್ಲಿ ಹನಿ ಟ್ರಾಪ್ ನ ಕಿಂಗ್ ಪಿನ್ ಕೂಡ ಸೇರಿದ್ದಾನೆ. ಕೇರಳ ಮೂಲದ ನಜಾಸ್, ಸರುಣ್, ಬೆಂಗಳೂರಿನ ವಿಷ್ಣು ಕೆ.ಟಿ, ದಿವಾಕರ್, ಮಧುಕುಮಾರ್, ಕಿರಣ್ ಅಸಲಿ ಪೊಲೀಸರಿಂದ ಬಂಧಿತರಾದ ನಕಲಿ ಪೊಲೀಸ್ ಕಿಲಾಡಿಗಳಾಗಿದ್ದಾರೆ. ಅಪರಿಚಿತರೊಂದಿಗೆ ಸ್ನೇಹ ಬೆಳೆಸುವಾಗ ಎಚ್ಚರಿಕೆ ವಹಿಸುವುದು ಅಗತ್ಯ ಎಂದು ಈ ಪ್ರಕರಣ ತೋರಿಸಿಕೊಟ್ಟಿದೆ.
ಇತ್ತೀಚೆಗೆ ಪಿಜಿಯಲ್ಲಿರು ಯುವತಿ ಯೋರ್ವಳಿಗೆ ಟೀ ಅಂಗಡಿಯಲ್ಲಿ ಬಂಧಿತ ಆರೋಪಿಗಳಲ್ಲಿ ಒಬ್ಬನಾದ ನಜಾಸ್ ಪರಿಚಯವಾಗಿದ್ದ. ಆತನ ಹುಟ್ಟುಹಬ್ಬ ಆಚರಣೆ ಮಾಡಲು ಕೋ ಲಿವಿಂಗ್ ಪಿಜಿಗೆ ಯುವತಿ ಕರೆದಿದ್ದಳು. ತನ್ನ ಗೆಳೆಯನ ಜೊತೆ ನಜಾಸ್ ಯುವತಿ ಪಿಜಿಗೆ ಹೋಗಿದ್ದ. ಮಧ್ಯರಾತ್ರಿಯಲ್ಲಿ ಬಾಗಿಲು ತಟ್ಟಿದ್ದ ಶಬ್ದವಾಗಿದೆ.
ಬಾಗಿಲು ತೆಗೆದಾಗ ನಾವು ಪೊಲೀಸರು ಅಂತ ನಾಲ್ಕೈದು ಜನರ ಗ್ಯಾಂಗ್ ರೂಮ್ ಸರ್ಚ್ ಮಾಡಿ ಯುವತಿಯರ ಬಳಿಯಿದ್ದ ಎರಡು ಮೊಬೈಲ್ ದರೋಡೆ ಮಾಡಿ 5 ಲಕ್ಷ ರೂ ಹಣಕ್ಕೆ ಬೇಡಿಕೆ ಇಟ್ಟಿದ್ದಾರೆ. ಒಂದು ವೇಳೆ ಕೊಡದಿದ್ದರೆ ಮತ್ತೆ ಬರುವುದಾಗಿ ಬೆದರಿಕೆ ಹಾಕಿದ್ದಾರೆ.




