ಮಂಗಳೂರು ಅಥೆನಾ ಆಸ್ಪತ್ರೆಯ ಚೇರ್ಮನ್ ನಿಧನ
ಮಂಗಳೂರು : ಮಂಗಳೂರಿನ ಪ್ರಸಿದ್ಧ ಅಥೆನಾ ಆಸ್ಪತ್ರೆಯ ಚೇರ್ಮನ್ ಆರ್.ಎಸ್.ಶೆಟ್ಟಿಯನ್ ಅವರು ನವೆಂಬರ್ 21 ರಂದು ನಿಧನರಾಗಿದ್ದಾರೆ. ಅಥೇನಾ ಆಸ್ಪತ್ರೆ ಮತ್ತು ಅಥೇನಾ ಸಮೂಹ ಸಂಸ್ಥೆಗಳ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕರಾಗಿ ಸೇವೆ ಸಲ್ಲಿಸಿದ್ದಾರೆ.
ಶೆಟ್ಟಿಯನ್ ಅವರು ಭಾರತದ ವೈಎಂಸಿಎ ರಾಷ್ಟ್ರೀಯ ಖಜಾಂಚಿ ಮತ್ತು ಟ್ರಸ್ಟಿಯಾಗಿ ಆಯ್ಕೆಯಾಗಿದ್ದರು. ವೈಎಂಸಿಎ ಟ್ರಸ್ಟಿ ಹುದ್ದೆಗಳಿಗೆ ಕರ್ನಾಟಕದಿಂದ ಆಯ್ಕೆಯಾಗ ಮೊದಲ ವ್ಯಕ್ತಿ ಇವರಾಗಿದ್ದರು.
ಶೆಟ್ಟಿಯನ್ ಅವರು ಬಲ್ಮಠದ ಸಿಎಸ್ಐ ಶಾಂತಿ ಕ್ಯಾಥೆಡ್ರಲ್ ಸದಸ್ಯರಾಗಿದ್ದರು. ಅವರು ಪತ್ನಿ, ಮಕ್ಕಳು ಮತ್ತು ಮೊಮ್ಮಕ್ಕಳನ್ನು ಅಗಲಿದ್ದಾರೆ. ಶೆಟ್ಟಿಯನ್ ಅವರ ನಿಧನಕ್ಕೆ ಸ್ಪೀಕರ್ ಖಾದರ್ ಸೇರಿದಂತೆ ಹಲವು ಗಣ್ಯರು ಸಂತಾಪ ಸೂಚಿಸಿದ್ದಾರೆ.




