ಪುತ್ತೂರು: ಮಾದಕವಸ್ತು MDMA ಮಾರಾಟಕ್ಕೆ ಯತ್ನಿಸುತ್ತಿದ್ದ ಆರೋಪಿ ಬಂಧನ
ಪುತ್ತೂರು: ನಿಷೇಧಿತ ಮಾದಕ ವಸ್ತು ಎಂಡಿಎಂಎ ಮಾರಾಟ ಮಾಡಲು ಯತ್ನಿಸುತ್ತಿದ ಡ್ರಗ್ ಪೆಡ್ಲರ್ ಒಬ್ಬನನ್ನು ಪುತ್ತೂರು ನಗರ ಠಾಣಾ ಪೊಲೀಸರು ಅರೆಸ್ಟ್ ಮಾಡಿದ್ದಾರೆ.
ಬಂಧಿತನನ್ನು ಮಹಮ್ಮದ್ ಮುಸ್ತಾಫ ಎಂದು ಗುರುತಿಸಲಾಗಿದೆ. ಆರೋಪಿ ದಿನಾಂಕ:15-11-2025 ರಂದು ಪುತ್ತೂರು ನಗರ ಠಾಣಾ ವ್ಯಾಪ್ತಿಯ ಕೆಮ್ಮಿಂಜೆ ಗ್ರಾಮದ, ಮುಕ್ರಂಪಾಡಿ ಕಮ್ಮಾಡಿ ಮರದ ಮಿಲ್ ಬಳಿ ವೀಣಾ ಎಂಬವರ ಬಾಬ್ತು ಬಾಡಿಗೆ ಕೋಣೆಯಲ್ಲಿ ಅಕ್ರಮವಾಗಿ ನಿಷೇದಿತ ಮಾದಕ ವಸ್ತು MDMA ನ್ನು ಮಾರಾಟ ಮಾಡುತ್ತಿರುವ ಬಗ್ಗೆ ಬಂದ ಖಚಿತ ಮಾಹಿತಿ ಮೇರೆಗೆ ಪೊಲೀಸರು ದಾಳಿ ನಡೆಸಿದ್ದಾರೆ.
ಈ ವೇಳೆ ಸದ್ರಿ ಬಾಡಿಗೆ ಕೋಣೆಯಲ್ಲಿ ಆರೋಪಿ ಯು ಅಕ್ರಮವಾಗಿ 14 ಗ್ರಾಂ ನಿಷೇದಿತ ಮಾದಕ ವಸ್ತು MDMA ನ್ನು ತನ್ನ ಬಳಿ ಇಟ್ಟುಕೊಂಡು ಮಾರಾಟ ಮಾಡುತ್ತಿರುವುದು ಕಂಡುಬಂದಿರುತ್ತದೆ. ಈ ಬಗ್ಗೆ ಆರೋಪಿ ಪುತ್ತೂರು ಕಬಕ ನಿವಾಸಿ ಮಹಮ್ಮದ್ ಮುಸ್ತಪಾ (36) ಎಂಬಾತನ ವಿರುದ್ದ ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ಅ.ಕ್ರ: 109/2025 ಕಲಂ;- 8(C),22(b) NDPS ಕಾಯ್ದೆಯಂತೆ ಪ್ರಕರಣ ದಾಖಲಿಸಲಾಗಿದೆ.




