ವಿಶ್ವಕಪ್ ಕಬಡ್ಡಿಯಲ್ಲಿ ಭಾರತ ತಂಡ ಪ್ರತಿನಿಧಿಸಲಿರುವ ಮಂಗಳೂರಿನ ಧನಲಕ್ಷ್ಮೀ ಪೂಜಾರಿ
ಮಂಗಳೂರು: ಬಾಂಗ್ಲಾದೇಶದಲ್ಲಿ ನಡೆಯುವ ಎರಡನೇ ವಿಶ್ವಕಪ್ಪ ಕಬ್ಬಡಿ ಪಂದ್ಯಾಟಕ್ಕೆ ಭಾರತೀಯ ಕಬ್ಬಡಿ ತಂಡಕ್ಕೆ ಕರ್ನಾಟಕದಿಂದ ಮಂಗಳೂರಿನ ಯುವತಿ ಧನಲಕ್ಷ್ಮೀ ಪೂಜಾರಿ ಆಯ್ಕೆಯಾಗಿದ್ದಾರೆ. ಕರ್ನಾಟಕದ ಪರವಾಗಿ ರಾಷ್ಟ್ರೀಯ ಕಬ್ಬಡಿ ತಂಡಕ್ಕೆ ಧನಲಕ್ಷ್ಮೀ ಒಬ್ಬರೇ ಆಯ್ಕೆಯಾಗಿದ್ದಾರೆ.ಮಂಗಳೂರು ಪ್ರವಾಸ
ಸುರತ್ಕಲ್ ಇಡ್ಯಾ ಸಂಜೀವ ಪೂಜಾರಿಯವರ ಮೊಮ್ಮಗಳು ನಾರಾಯಣ ಪೂಜಾರಿ ಹಾಗೂ ಶಶಿಕಲಾ ದಂಪತಿಯ ಮಗಳಾದ ಧನಲಕ್ಷ್ಮೀ ಇವರು ಕಬಡ್ಡಿ ಕ್ರೀಡೆಯಲ್ಲಿ ಭಾರತ ದೇಶದ ಪರವಾಗಿ ಆಡಲು ಆಯ್ಕೆಯಾಗಿದ್ದಾರೆ, ಕರ್ನಾಟಕದ ಪರವಾಗಿ ಧನಲಕ್ಷ್ಮೀ ಒಬ್ಬರೇ ಆಯ್ಕೆಯಾಗಿದ್ದು, ದಕ್ಷಿಣಕನ್ನಡಕ್ಕೆ ಮತ್ತು ನಮ್ಮ ರಾಜ್ಯಕ್ಕೆ ಹೆಮ್ಮೆಯ ಕ್ಷಣವಾಗಿದೆ.
ನವೆಂಬರ್ 13ರಂದು ಬಾಂಗ್ಲಾದೇಶ ದಲ್ಲಿ ನಡೆಯಲಿರುವ 12 ರಾಷ್ಟ್ರಗಳ ಮಹಿಳಾ ವಿಶ್ವಕಪ್ ಕಬಡ್ಡಿಯಲ್ಲಿ ಭಾರತೀಯ ತಂಡವನ್ನು ಪ್ರತಿನಿಧಿಸಲಿದ್ದಾರೆ.





