September 22, 2026

ರಷ್ಯಾದಲ್ಲಿ ನಾಪತ್ತೆಯಾಗಿದ್ದ ಭಾರತೀಯ ಮೂಲದ ವಿದ್ಯಾರ್ಥಿ ಮೃತದೇಹ ನದಿಯಲ್ಲಿ ಪತ್ತೆ

0
image_editor_output_image1886414048-1762496454874.jpg

ರಷ್ಯಾ: ರಷ್ಯಾದಲ್ಲಿ 19 ದಿನಗಳ ಹಿಂದೆ ನಾಪತ್ತೆಯಾಗಿದ್ದ, 22 ವರ್ಷದ ಭಾರತೀಯ ಮೂಲದ ವಿದ್ಯಾರ್ಥಿ ಅಜಿತ್ ಸಿಂಗ್ ಚೌಧರಿ ಶವವಾಗಿ ಪತ್ತೆಯಾಗಿದ್ದಾನೆ.

ರಷ್ಯಾದ ಉಫಾ ನಗರದ ಬಶ್ಕಿರ್ ಸ್ಟೇಟ್ ಮೆಡಿಕಲ್ ಯೂನಿವರ್ಸಿಟಿಯಲ್ಲಿ ಎಂಬಿಬಿಎಸ್ ವ್ಯಾಸಂಗ ಮಾಡುತ್ತಿದ್ದ, ರಾಜಸ್ಥಾನ ಮೂಲದ ಅಜಿತ್‌ ಸಿಂಗ್‌ ಅಕ್ಟೋಬರ್ 19ರಂದು ಹಾಸ್ಟೆಲ್‌ನಿಂದ ಹಾಲು ತರಲು ಹೋಗಿ ನಾಪತ್ತೆಯಾಗಿದ್ದ , ಈಗ ಸುಮಾರು 19 ದಿನಗಳ ನಂತರ ರಷ್ಯಾದ ನದಿಯೊಂದರ ಬಳಿ ಶವವಾಗಿ ಪತ್ತೆಯಾಗಿದ್ದಾನೆ.

 

ಈ ಕುರಿತು ಇನ್ನು, ಭಾರತೀಯ ರಾಯಭಾರಿ ಕಚೇರಿಯಿಂದ ಯಾವುದೇ ಅಧಿಕೃತ ಮಾಹಿತಿ ಇಲ್ಲವಾದರೂ, ತಮ್ಮ ಕುಟುಂಬಕ್ಕೆ ಮಾಹಿತಿ ನೀಡಲಾಗಿದೆ ಎಂದು ತಿಳಿದು ಬಂದಿದೆ. 19 ದಿನಗಳ ಹಿಂದೆ ನಾಪತ್ತೆಯಾಗಿದ್ದ ವ್ಯಕ್ತಿ ಈಗ ರಷ್ಯಾದ ಉಫಾ ನಗರದ ವೈಟ್‌ ನದಿ ( ಬೇಲಾಯ ನದಿ) ಬಳಿ ಶವವಾಗಿ ಪತ್ತೆಯಾಗಿದ್ದಾನೆಂದು ಮಾಹಿತಿ ಬಂದಿದೆ ಎಂದು ಅಲ್ವಾರ್ ಸರಸ್ ಡೈರಿ ಅಧ್ಯಕ್ಷ ನಿತಿನ್ ಸಾಂಗ್ವಾನ್ ತಿಳಿಸಿದ್ದಾರೆ.

Leave a Reply

Your email address will not be published. Required fields are marked *

You may have missed

error: Content is protected !!