ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಎ.ಕೆ ಕುಕ್ಕಿಲ ಅವರಿಗೆ ಕೋಡಪದವು ಸೌಹಾರ್ದ ಫ್ರೆಂಡ್ಸ್ ವತಿಯಿಂದ ಹುಟ್ಟೂರ ಸನ್ಮಾನ
ವಿಟ್ಲ: ದ.ಕ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಅಬ್ದುಲ್ ಖಾದರ್ ಕುಕ್ಕಿಲ-ಎ.ಕೆ ಕುಕ್ಕಿಲ ಅವರಿಗೆ ಕೋಡಪದವು ಸೌಹಾರ್ದ ಫ್ರೆಂಡ್ಸ್ ವತಿಯಿಂದ ಹುಟ್ಟೂರ ಸನ್ಮಾನ ಕಾರ್ಯಕ್ರಮ ನಡೆಯಿತು.
ನಿವೃತ್ತ ಬಿಎಸ್ ಎನ್ ಎಲ್ ಉದ್ಯೋಗಿ ಡಿ ಕೆ ಇಬ್ರಾಹಿಂ ಅವರು ಎಕೆ ಕುಕ್ಕಿಲ ಅವರ ಅಭಿನಂದನಾ ಭಾಷಣ ಮಾಡಿ ಮಾತನಾಡಿ ಅವರು ಕಳೆದ ಎರಡು ದಶಕಗಳಿಂದ ಮಂಗಳೂರಿನ ಸುದ್ದಿ ಮತ್ತು ಮಾಧ್ಯಮ ಕ್ಷೇತ್ರದಲ್ಲಿ ಸಕ್ರಿಯರಾಗಿದ್ದೀರಿ. ಕೇವಲ ಪತ್ರಕರ್ತರಷ್ಟೇ ಅಲ್ಲದೆ, ಲೇಖಕ, ಚಿಂತಕ ಹಾಗೂ ಸಮಾಜಮುಖಿ ಚಟುವಟಿಕೆಗಳ ಪ್ರೇರಕರಾಗಿಯೂ ಪ್ರಸಿದ್ಧಿ ಪಡೆದಿದ್ದೀರಿ. ಸನ್ಮಾರ್ಗ ಮಾಧ್ಯಮದ ಪ್ರಧಾನ ಸಂಪಾದಕರಾಗಿ ತಮ್ಮ ಸಂಸ್ಥೆಯನ್ನು ನಿಷ್ಪಕ್ಷಪಾತ ವರದಿಗಾರಿಕೆ, ಸಾಮಾಜಿಕ ನ್ಯಾಯದ ಪ್ರಚಾರ ಮತ್ತು ದಮನಿತರ ಧ್ವನಿಯನ್ನು ಬಲಪಡಿಸುವ ವೇದಿಕೆಯಾಗಿ ಬೆಳೆಸಿದ್ದಾರೆ ಎಂದು ಹೇಳಿದರು.

ಸೌಹಾರ್ದ ಫ್ರೆಂಡ್ಸ್ ಕೋಡಪದವು,
ಎಸ್.ವೈ.ಎಫ್ ಕುಕ್ಕಿಲ ಹಾಗೂ ಎಂ ಕೆ ಫ್ಯಾಮಿಲಿ ವತಿಯಿಂದ ಅವರನ್ನು ಅದ್ದೂರಿಯಾಗಿ ಸನ್ಮಾನಿಸಲಾಯಿತು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಎ ಕೆ ಕುಕ್ಕಿಲ ಅವರು ಬಾಲ್ಯದಿಂದಲೇ ಕುಕ್ಕಿಲ ಭಾಗದಲ್ಲಿ ಓಡಾಡಿದ ವ್ಯಕ್ತಿ ನಾನು ಇಲ್ಲಿಯ ಪ್ರತಿಯೊಬ್ಬರ ಸಹಕಾರ ನಾನಿಂದ ಬೆಳೆಯಲು ಸಹಕಾರಿಯಾಗಿದೆ ಎಂದರು.
ನಿವೃತ್ತ ಬಿ.ಎಸ್.ಎನ್.ಎಲ್ ಉದ್ಯೋಗಿ, ಅವರ ಆಪ್ತ ಡಿ ಕೆ ಇಬ್ರಾಹಿಂ, ರಹ್ಮಾನಿಯ ಜುಮಾ ಮಸ್ಜಿದ್ ಕೋಡಪದವು ಪ್ರಧಾನ ಕಾರ್ಯದರ್ಶಿ ರಹೀಮ್ ಕೋಡಪದವು, ಎಸ್ ಡಿ ಎಂ ಸಿ ಕೋಡಪದವು ಶಾಲೆಯ ಅಧ್ಯಕ್ಷರಾದ ಉಮರ್ ಫಾರೂಕ್ ಟೆಕ್ನಿಕ್, ಎಸ್ ವೈ ಎಸ್ ಮುಖಂಡರಾದ ಮಹಮ್ಮದ್ ಬೀಡಿ, ಬಿಗ್ ಬ್ಲಾಸ್ಟರ್ ಕೋಡಪದವು ಮಾಜಿ ಅಧ್ಯಕ್ಷರಾದ ಕಬೀರ್ ತಾಳಿತ್ತನೂಜಿ, ವಿಟ್ಲ ಪಡ್ನೂರು ಗ್ರಾಮ ಪಂಚಾಯತ್ ಸದಸ್ಯರಾದ ಹರ್ಷದ್ ಕುಕ್ಕಿಲ, ಝಿಯಾದ್ ಕಂಪದಬೈಲು, ಯಾಸಿರ್ ಕುಕ್ಕಿಲ, ಫಾರೂಕ್ ಬೊನ್ಯಕುಕ್ಕು, ಹಂಝ ತಾಳಿತ್ತನೂಜಿ, ಇಮ್ರಾನ್ ಬೊನ್ಯಕುಕ್ಕು, ಹನೀಫ್ ಕಂಪದಬೈಲು, ಸಿದ್ದೀಕ್ ಸರಾವು, ಎ.ಕೆ ಕುಕ್ಕಿಲ ಅವರ ಕುಟುಂಬಸ್ಥರು ಭಾಗವಹಿಸಿದ್ದರು.
ಸಿರಾಜ್ ಮದಕ ಸ್ವಾಗತಿಸಿ, ವಂದಿಸಿದರು.




