ಪುತ್ತೂರು: ಕಾರು ಹಾಗೂ ಅಟೋ ರಿಕ್ಷಾ ನಡುವೆ ಭೀಕರ ಅಪಘಾತ ಪ್ರಕರಣ: ಮೃತಪಟ್ಟ ಶಾಝ್ಮಾ ಫಾತಿಮಾಳ ಅಜ್ಜಿ ಕೂಡಾ ಮೃತ್ಯು
ಪುತ್ತೂರು: ಮಾಣಿ–ಮೈಸೂರು ರಾಷ್ಟ್ರೀಯ ಹೆದ್ದಾರಿಯ ಒಳಮೊಗರು ಗ್ರಾಮದ ಪರ್ಪುಂಜ ಅಬ್ರಾಡ್ ಹಾಲ್ ಬಳಿ ಕಾರು ಹಾಗೂ ಅಟೋ ರಿಕ್ಷಾ ನಡುವೆ ಭೀಕರ ಅಪಘಾತ ಸಂಭವಿಸಿದ್ದು, ಬೊಳ್ವಾರ್ ಕಾಪಿಕಾಡ್ ನಿವಾಸಿ ಝುಲೈಕಾ ಹಾಗೂ ಅವರ ಮೊಮ್ಮಗಳು ಶಾಝ್ಮಾ ಫಾತಿಮಾ ಮೃತಪಟ್ಟಿದ್ದಾರೆ.
ಪಿರ್ಯಾದುದಾರರಾದ ಬನ್ನೂರು ನಿವಾಸಿ ಹನೀಫ್ ರವರು ನೀಡಿದ ದೂರಿನ ಪ್ರಕಾರ, ದಿನಾಂಕ 01.11.2025 ರಂದು ಸಂಜೆ ಸುಮಾರು 4.15ಕ್ಕೆ ತಮ್ಮ ಕುಟುಂಬದವರಾದ ಪತ್ನಿ, ಅತ್ತೆ, ಭಾವನ ಹೆಂಡತಿ ಹಾಗೂ ಮೂವರು ಮಕ್ಕಳೊಂದಿಗೆ KA-21-C-3491 ನಂಬರಿನ ಅಟೋ ರಿಕ್ಷಾದಲ್ಲಿ ಬೊಳ್ವಾರಿಯಿಂದ ಪುತ್ತೂರಿನತ್ತ ಹೊರಟು ಬಂದಾಗ, ಎದುರಿನಿಂದ ಬಂದ TN-72-BL-1759 ನಂಬರಿನ ಕಾರು ಚಾಲಕ ಲಕ್ಷ್ಮಿಬದಿರಾಜು ಅವರು ಅಜಾಗರೂಕತೆ ಮತ್ತು ನಿರ್ಲಕ್ಷತನದಿಂದ ತಪ್ಪು ಬದಿಯಲ್ಲಿ ಕಾರು ಓಡಿಸಿ ರಿಕ್ಷಾಗೆ ಡಿಕ್ಕಿ ಹೊಡೆದಿದ್ದಾರೆ. ಪರಿಣಾಮವಾಗಿ ರಿಕ್ಷಾ ಉರುಳಿ ಬಿದ್ದು ಪ್ರಯಾಣಿಕರು ಗಂಭೀರವಾಗಿ ಗಾಯಗೊಂಡಿದ್ದಾರೆ.
ಈ ಘಟನೆಯಲ್ಲಿ ಹನೀಫ್ ರವರ ಮಗಳು ಶಾಝ್ಮಾ ಫಾತಿಮಾ (6) ಸ್ಥಳದಲ್ಲೇ ಮೃತಪಟ್ಟಿದ್ದು, ಬೊಳ್ವಾರ್ ಕಾಪಿಕಾಡ್ ನಿವಾಸಿ ಹಾಗೂ ಭಾರತ್ ಬೀಡಿ ಕಂಪನಿಯ ಉದ್ಯೋಗಿ ಅಬ್ದುಲ್ಲಾ ಕುಂಞ ರವರ ಪತ್ನಿ ಝುಲೈಕಾ (ಪುತ್ತೂರು RTO ಕಛೇರಿಯ ಉದ್ಯೋಗಿ ಜಬ್ಬಾರ್, ಗಲ್ಫ್ ಉದ್ಯೋಗಿ ರಿಯಾಝ್ ಹಾಗೂ ಇಕ್ಬಾಲ್ ರವರ ತಾಯಿ) ಮಂಗಳೂರಿನ KMC ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಈವಾಗ ನಿಧನರಾದರು.
ಈ ಕುರಿತು ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಕಲಂ 281, 125(a), 125(b), 106 ಬಿ.ಎನ್.ಎಸ್. 2023 ರಂತೆ ತನಿಖೆ ನಡೆಯುತ್ತಿದೆ.




